alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಹತಾ ಸುತ್ತಿನಲ್ಲೇ ಯೋಗೇಶ್ವರ್ ದತ್ ಗೆ ಸೋಲು

yogeshwar ದುತತ ನಮ

ರಿಯೋ ಡಿ ಜನೈರೋ: ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮತ್ತೊಂದು ಪದಕ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿಯೇ ಯೋಗೇಶ್ವರ್ ದತ್ ಮುಗ್ಗರಿಸಿದ್ದಾರೆ.

ಪುರುಷರ 65 ಕೆ.ಜಿ. ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿಯೇ ಯೋಗೇಶ್ವರ್ ದತ್ ಅವರು, ಮಂಗೋಲಿಯಾ ದೇಶದ ಕುಸ್ತಿಪಟು ಮಂದಕ್ನರಾನ್ ವಿರುದ್ಧ ಸೋಲು ಕಂಡಿದ್ದಾರೆ. ಪಂದ್ಯ ಆರಂಭವಾದಾಗ ಉತ್ತಮ ಪ್ರದರ್ಶನ ನೀಡಿದ ಯೋಗೇಶ್ವರ್ ದತ್ ಮುಂದಿದ್ದರು. ಆದರೆ, ನಂತರದಲ್ಲಿಯೇ ಮಂದಕ್ನರಾನ್ ರಕ್ಷಣಾತ್ಮಕ ಆಟವಾಡುವ ಮೂಲಕ, ಮೇಲುಗೈ ಸಾಧಿಸಿದರು. ಅಂತಿಮವಾಗಿ ಯೋಗೇಶ್ವರ್ ದತ್ ವಿರುದ್ಧ 3-0 ಅಂತರದಿಂದ ಗೆಲುವು ಕಂಡಿದ್ದಾರೆ.

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದ ಯೋಗೇಶ್ವರ್ ದತ್ ರಿಯೋ ಒಲಿಂಪಿಕ್ಸ್ ನಲ್ಲಿಯೂ ಪದಕ ತರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಅವರು ಅರ್ಹತಾ ಸುತ್ತಿನ ಪಂದ್ಯದಲ್ಲಿಯೇ ಸೋಲು ಕಾಣುವುದರೊಂದಿಗೆ ಪದಕದ ಆಸೆ ಕಮರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...