alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಳಿದಂತೆಯೇ ಸೇಡು ತೀರಿಸಿಕೊಂಡ ‘ಗ್ರೇಟ್ ಖಲಿ’

khali-win 88

ಉತ್ತರಾಖಂಡ್ ಹಲ್ದಾವನಿಯಲ್ಲಿ ಏರ್ಪಡಿಸಿದ್ದ ಪ್ರದರ್ಶನ ಪಂದ್ಯವೊಂದರಲ್ಲಿ ಎದುರಾಳಿ ಸ್ಪರ್ಧಿಗಳಿಂದ ಹೊಡೆತ ತಿಂದು ತೀವ್ರವಾಗಿ ಗಾಯಗೊಂಡಿದ್ದ ಡಬ್ಲ್ಯೂ.ಡಬ್ಲ್ಯೂ.ಇ. ಆಟಗಾರ ‘ಗ್ರೇಟ್ ಖಲಿ’ ತಾವು ಹೇಳಿದಂತೆಯೇ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದ್ದ ಡಬ್ಲ್ಯೂ.ಡಬ್ಲ್ಯೂ.ಇ. ಆಟಗಾರ ‘ಗ್ರೇಟ್ ಖಲಿ’ ವೀಕ್ಷಕರ ಭಾರೀ ಬೆಂಬಲ ಕರತಾಡನದೊಂದಿಗೆ ತಮ್ಮನ್ನು ಎದುರಿಸುವಂತೆ ಸವಾಲು ಹಾಕಿದ್ದರು. ಹೀಗೆ ಆರಂಭವಾದ ಪ್ರದರ್ಶನ ಪಂದ್ಯದಲ್ಲಿ ಖಲಿ ಅವರಿಗೆ ಎದುರಾಳಿಗಳು ಮಾಡಿದ ದಾಳಿಗೆ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ, ಮುಂದಿನ ಪಂದ್ಯದಲ್ಲಿ ಎದುರಾಳಿಗಳ ಮಣ್ಣುಮುಕ್ಕಿಸುತ್ತೇನೆ. ರಕ್ತಕ್ಕೆ ರಕ್ತ ಸುರಿಸುತ್ತೇನೆ ಎಂದು ಗುಡುಗಿದ್ದರು.

ಆಸ್ಪತ್ರೆಯಿಂದ ಹೊರಬಂದ ಖಲಿ ಡೆಹ್ರಾಡೂನ್ ನ ಪ್ರತಾಪ್ ಸ್ಟೇಡಿಯಂನಲ್ಲಿ ನಡೆದ ‘ದಿ ಗ್ರೇಟ್ ಖಲಿ ರಿಟರ್ನ್ ಶೋ’ನಲ್ಲಿ ಫೈಟರ್ಸ್ ಗಳಾದ ಬ್ರೂಡಿ, ಮೆಕ್ಸ್ ಮತ್ತು ಅಪೊಲೋ ಅವರನ್ನು ಮಣ್ಣುಮುಕ್ಕಿಸಿ ಫೈನಲ್ ಪಂದ್ಯದಲ್ಲಿ ವಿಜೇತರಾಗಿದ್ದಾರೆ. ಆ ಮೂಲಕ ತಾವು ಹೇಳಿದಂತೆಯೇ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...