alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ತಕ್ಕೆ ರಕ್ತ ಕೊಟ್ಟು ಮತ್ತೆ ಸೆಣೆಸಾಡುವೆ ಎಂದ ‘ಗ್ರೇಟ್ ಖಲಿ’

the-great-khali

ನವದೆಹಲಿ: ಉತ್ತರಾಖಂಡ್ ಹಲ್ದಾವಾನಿಯಲ್ಲಿ ಆಯೋಜಿಸಿದ್ದ ಪ್ರದರ್ಶನ ಪಂದ್ಯದಲ್ಲಿ ಕುಸ್ತಿ ಆಡುವಾಗ ಗಂಭೀರವಾಗಿ ಗಾಯಗೊಂಡಿದ್ದ WWE ಆಟಗಾರ ದಲೀಪ್ ಸಿಂಗ್ ರಾಣಾ ಅಲಿಯಾಸ್ ‘ಗ್ರೇಟ್ ಖಲಿ’ ಮುಂದಿನ ಪಂದ್ಯದಲ್ಲಿ ಎದುರಾಳಿಯನ್ನು ಮಣ್ಣುಮುಕ್ಕಿಸುತ್ತೇನೆ ಎಂದು ಗುಡುಗಿದ್ದಾರೆ.

ಪ್ರದರ್ಶನ ಪಂದ್ಯದಲ್ಲಿ ಗ್ರೇಟ್ ಖಲಿ ಹಾಕಿದ ಸವಾಲಿಗೆ ಪ್ರತ್ಯುತ್ತರ ನೀಡಿದ್ದ ವಿದೇಶದ ಕುಸ್ತಿ ಆಟಗಾರರು ಖಲಿಯನ್ನು ಎದುರಿಸಿದ್ದರು. ಆಗ ಪಂದ್ಯದಲ್ಲಿ ಎದುರಾಳಿಗಳು ಕೊಟ್ಟ ಪಂಚ್ ಗೆ ಖಲಿ ನೆಲಕ್ಕೆ ಬಿದ್ದಿದ್ದರು. ಕೆನಡಾದ ಸ್ಪರ್ಧಿಗಳು ಕೊಟ್ಟ ಹೊಡೆತಕ್ಕೆ ಅವರ ತಲೆಗೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಖಲಿ ಬಾಲಿವುಡ್ ಸಿನೆಮಾಗಳಲ್ಲಿಯೂ ನಟಿಸಿದ್ದು, ಆರಂಭದಲ್ಲಿ ಫುಲ್ ಶೋ ಕೊಟ್ಟ ಖಲಿ ಸವಾಲ್ ಹಾಕಿ ವೀಕ್ಷಕರಿಂದ ಭಾರೀ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದರಾದರೂ, ಅವರೇ ಆಸ್ಪತ್ರೆ ಸೇರುವಂತಾಗಿತ್ತು.

ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಲಿ, ಚಿಕಿತ್ಸೆ ನಂತರ ಚೇತರಿಸಿಕೊಂಡು ನನಗೆ ಆಸ್ಪತ್ರೆ ಸೇರುವಂತೆ ಮಾಡಿದವರನ್ನು ಮುಂದಿನ ಕುಸ್ತಿ ಪಂದ್ಯದಲ್ಲಿ ಸೋಲಿಸುತ್ತೇನೆ. ರಕ್ತಕ್ಕೆ ರಕ್ತ ಕೊಟ್ಟು ಸೆಣೆಸಾಡುವ ಮೂಲಕ ತಕ್ಕ ಪಾಠ ಕಲಿಸುತ್ತೇನೆ. ಅಭಿಮಾನಿಗಳು ಎಂದಿನಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...