alex Certify
ಕನ್ನಡ ದುನಿಯಾ       Mobile App
       

Kannada Duniya

26 ರನ್ ಗೆ ಚೀನಾ ಆಲೌಟ್: ಶೂನ್ಯ ಸುತ್ತಿದ 8 ಆಟಗಾರರು…!

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಆರ್ಥಿಕವಾಗಿ ಎರಡನೇ ಸ್ಥಾನದಲ್ಲಿದೆ. ಚೀನಾ ಕ್ರೀಡೆಯಲ್ಲೂ ಮುಂದಿದೆ. ಓಲಂಪಿಕ್ಸ್ ನಲ್ಲಿ ಚೀನಾ ಅತಿ ಹೆಚ್ಚು ಚಿನ್ನದ ಪದಗಳನ್ನು ಬಾಚಿಕೊಳ್ಳುತ್ತದೆ. ಆದ್ರೆ ಒಂದು ಕ್ಷೇತ್ರದಲ್ಲಿ ಚೀನಾ ತುಂಬಾ ಹಿಂದಿದೆ. ಅದು ಕ್ರಿಕೆಟ್. ಚೀನಾ, ಕ್ರಿಕೆಟ್ ಮೈದಾನದಲ್ಲಿ ನೇಪಾಳದಂತಹ ಸಣ್ಣ ದೇಶದ ಮುಂದೆ ಹೀನಾಯವಾಗಿ ಸೋಲುಂಡಿದೆ.

2020 ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ಅರ್ಹತಾ ಪಂದ್ಯಗಳು ನಡೆಯುತ್ತಿದೆ. ಚೀನಾ ನೇಪಾಳದ ವಿರುದ್ಧ ಅತಿ ಕಡಿಮೆ ಮೊತ್ತವನ್ನು ಕಲೆ ಹಾಕಿದೆ. ಚೀನಾ 26 ರನ್ ಗಳಿಗೆ ತನ್ನೆಲ್ಲ ವಿಕೆಟ್ ಒಪ್ಪಿಸಿದೆ. 8 ಆಟಗಾರರು ಶೂನ್ಯ ಸುತ್ತಿದ್ದಾರೆ. ಚೀನಾ ನೀಡಿದ 26 ರನ್ ಗುರಿ ಬೆನ್ನು ಹತ್ತಿದ ನೇಪಾಳ 1.5 ಓವರ್ ಗಳಲ್ಲಿ ಅಂದ್ರೆ 11 ಬಾಲಿಗೆ ಆಟ ಮುಗಿಸಿದೆ.

ಈ ಪಂದ್ಯಕ್ಕೂ ಮುನ್ನ ಚೀನಾ ಥೈಲ್ಯಾಂಡ್, ಭೂತಾನ್, ಮ್ಯಾನ್ಮಾರ್ ವಿರುದ್ಧ 35, 45 ಮತ್ತು 48 ರನ್ ಗಳಿಸಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಚೀನಾ ಪದಾರ್ಪಣೆ ಮಾಡಿ ಒಂದು ದಶಕವೂ ಕಳೆದಿಲ್ಲ. 2010 ರಲ್ಲಿ ಚೀನಾ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...