alex Certify
ಕನ್ನಡ ದುನಿಯಾ       Mobile App
       

Kannada Duniya

20 ಎಸೆತಕ್ಕೆ 102 ರನ್ ಗಳಿಸಿದ ವೃದ್ಧಿಮಾನ್ ಸಾಹಾ

ಐಪಿಎಲ್ 2018ರ ಆರಂಭಕ್ಕೂ ಮುನ್ನವೇ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ವೃದ್ಧಿಮಾನ್ ಸಾಹಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜೆಸಿ ಮುಖರ್ಜಿ ಟ್ರೋಫಿ ಟಿ-20 ಪಂದ್ಯದಲ್ಲಿ ಮೋಹನ್ ಬಾಗಾನ ಕ್ಲಬ್ ಪರ ಅತ್ಯದ್ಭುತ ಆಟ ಪ್ರದರ್ಶಿಸಿದ್ದಾರೆ. ಕೇವಲ 20 ಓವರ್ ಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.

ಸಾಹಾ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಹಿಂದಿಕ್ಕಿದ್ದಾರೆ. ಐಪಿಎಲ್ 2013ರಲ್ಲಿ ಗೇಲ್ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. 33 ವರ್ಷದ ಸಾಹಾ ಬಿಎನ್ಆರ್ ರಿಕ್ರಿಯೇಶನ್ ಕ್ಲಬ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಕಾಲಿಘಾಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 20 ಎಸೆತಕ್ಕೆ 102 ರನ್ ಗಳಿಸಿದ್ದಾರೆ.

ಬಿಎನ್ ಆರ್ ತಂಡ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಮೋಹನ್ ಬಾಗಾನ ಕ್ಲಬ್ ಪರ ಮೈದಾನಕ್ಕಿಳಿದ ಸಾಹಾ 14 ಸಿಕ್ಸ್ ಹಾಗೂ 4 ಬೌಂಡರಿ ಬಾರಿಸಿದ್ರು. ಈ ಹಿಂದೆ ಕೂಡ ಸಾಹಾ ಅಬ್ಬರಿಸಿದ್ದರು. ಐಪಿಎಲ್ 2014ರಲ್ಲಿ 55 ಎಸೆತಕ್ಕೆ  ಸಾಹಾ 115 ರನ್ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...