alex Certify
ಕನ್ನಡ ದುನಿಯಾ       Mobile App
       

Kannada Duniya

ಅಶಿಸ್ತಿನ ಆರೋಪ ಹೊತ್ತ ಪೋಗತ್ ಸಹೋದರಿಯರಿಗೆ ಬಿಗ್ ಶಾಕ್

ಭಾರತದ ಮಹಿಳಾ ಕುಸ್ತಿಪಟುಗಳಾದ ಪೋಗತ್ ಸಹೋದರಿಯರಿಗೆ ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಆಡುವುದು ಕನಸಿನ ಮಾತಾಗ್ತಿದೆ. ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಅಶಿಸ್ತಿನ ಆರೋಪದಡಿ ಪೋಗತ್ ಸಹೋದರಿಯರನ್ನು ಶಿಬಿರದಿಂದ ಹೊರ ಹಾಕಿದೆ.

ಕುಸ್ತಿಪಟುಗಳಾದ ಗೀತಾ ಪೋಗತ್, ಬಬಿತಾ ಪೋಗತ್, ರೀತು ಪೋಗತ್, ಸಂಗೀತಾ ಪೋಗತ್ ಶಿಬಿರದಿಂದ ಹೊರ ಬಿದ್ದಿದ್ದಾರೆ. ಏಷ್ಯನ್ ಗೇಮ್ಸ್ ಗಾಗಿ ಲಕ್ನೋದಲ್ಲಿ ಮಹಿಳಾ ಕುಸ್ತಿಪಟುಗಳ ಶಿಬಿರ ನಡೆಯುತ್ತಿದೆ. ಮೇ 10ರಿಂದ ಶಿಬಿರ ಶುರುವಾಗಿದ್ದು, ಜೂನ್ 25ರವರೆಗೆ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಪೋಗತ್ ಸಹೋದರಿಯರು ಪಾಲ್ಗೊಂಡಿಲ್ಲ.

ಶಿಬಿರದಲ್ಲಿ ಪಾಲ್ಗೊಂಡ ಆಟಗಾರರು ಮಾತ್ರ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಅಮಿರ್ ಖಾನ್ ಅಭಿನಯದ ‘ದಂಗಲ್’ ಚಿತ್ರದ ಮೂಲಕ ಮತ್ತಷ್ಟು ಹೆಸರು ಮಾಡಿದ್ದ ಪೋಗತ್ ಸಹೋದರಿಯರಿಗೆ ಶಿಬಿರದಲ್ಲಿ ಪಾಲ್ಗೊಳ್ಳದಿರುವುದು ಭಾರೀ ಹೊಡೆತ ನೀಡಲಿದೆ.

ಮುಂದಿನ ಪಂದ್ಯಗಳಿಗೆ ಸ್ಪರ್ಧಿಸಲು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಆದ್ರೆ ಅನೇಕ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿಲ್ಲ. ಶಿಬಿರದಲ್ಲಿ ಪಾಲ್ಗೊಂಡಿಲ್ಲವೆಂದಾದ್ರೆ ಶಿಸ್ತಿಲ್ಲವೆಂದೇ ಅರ್ಥ. ಪೋಗತ್ ಸಹೋದರಿಯರ ಜೊತೆ 15 ಕುಸ್ತಿಪಟುಗಳಿಗೆ ಫೆಡರೇಷನ್ ನೊಟೀಸ್ ಜಾರಿ ಮಾಡಿದೆ. ಶಿಬಿರದಲ್ಲಿ ಪಾಲ್ಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...