alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಗೆದ್ದ ಸಂಭ್ರಮದಲ್ಲಿರುವಾಗಲೇ ಮತ್ತೊಂದು ಖುಷಿ ಸುದ್ದಿ ಕೊಟ್ಟ ರಿಯಲ್ ‘ದಂಗಲ್’ ಹುಡುಗಿ

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಾಟ್‌ ನಿಶ್ಚಿತಾರ್ಥ ನೆರವೇರಿದ್ದು, ಈ ಕುರಿತ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಾಕಿದ್ದಾರೆ.

ವಿನೇಶ್‌, ಭಾರತದ ಇನ್ನೋರ್ವ ಕುಸ್ತಿ ಪಟು ಸೋನೆಪತ್‌ ಮೂಲದ ಸೋಮ್ ವೀರ್ ಎಂಬುವವರೊಂದಿಗೆ ಎಂಗೇಜ್ ಆಗಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸೋಮ್‌ವೀರ್‌ ಕಂಚಿನ ಪದಕ ಗೆದ್ದಿದ್ದರು. ನಿಶ್ಚಿತಾರ್ಥದ ಸಂಗತಿಯನ್ನು ಹಂಚಿಕೊಂಡಿರುವ ವಿನೇಶ್, ”ಇದು ನನ್ನ ಜೀವನದಲ್ಲಿ ಈವರೆಗಿನ ಅತ್ಯುನ್ನತ ನಿರ್ಧಾರ.” ಎಂದು ಹೇಳಿದ್ದಾರೆ.

ಏಷ್ಯನ್‌ ಗೇಮ್ಸ್‌ನ 50 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನ ಗೆದ್ದ 23 ವರ್ಷದ ವಿನೇಶ್‌, ಈ ಸಾಧನೆ ಮೆರೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...