alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ವಿಜೇತರಿಗೆ ತವರಿನಲ್ಲಿ ಹೃದಯಸ್ಪರ್ಶಿ ಸ್ವಾಗತ

ಫ್ರಾನ್ಸ್‌ನಲ್ಲಿ ವಿಶ್ವ ಸಾಮ್ರಾಟರಿಗೆ ಹೃದಯಸ್ಪರ್ಶಿ ಸ್ವಾಗತ ಸಿಕ್ಕಿದೆ. ರಷ್ಯಾದಲ್ಲಿ ಇತಿಹಾಸ ನಿರ್ಮಿಸಿದ ಫ್ರಾನ್ಸ್ ಫುಟ್ಬಾಲ್ ತಂಡಕ್ಕೆ ತವರಿನಲ್ಲಿ ಭಾರೀ ವೆಲ್ ಕಮ್. ಅಬ್ಬಾ ಎಲ್ಲಂದ್ರಲ್ಲಿ ಜನ. ಸಾಗರದಂತೆ ಕಾಣುವ ಅಭಿಮಾನಿಗಳ ಸಮೂಹ. ಫ್ರಾನ್ಸ್ ಬಾವುಟ, ಜೆರ್ಸಿ ತೊಟ್ಟ ಅಭಿಮಾನಿಗಳು, ಸಾಧಕರ ಬರುವಿಕೆಗಾಗಿ ಕಾದು ಕುಳಿತಿದ್ದರು.

ಅಲ್ಲದೆ 2 ದಶಕಗಳಿಂದ ಮಾಯಾಜಿಂಕೆಯಂತೆ ಕಾಡಿದ ಫಿಫಾ ವಿಶ್ವಕಪ್ ನೋಡಿ, ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ಉತ್ಸುಕರಾಗಿದ್ದರು. ಎಲ್ಲಿ ನೋಡಿದ್ರೂ ಸಂಭ್ರಮ. ವಿಶ್ವ ವಿಜೇತರನ್ನು ನೋಡುವ ಪುಳಕ.

ಭಾನುವಾರ ರಷ್ಯಾದ ಮಾಸ್ಕೋದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಮಣಿಸಿತ್ತು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರ ಆಟ ಅಭಿಮಾನಿಗಳ ಮನ ಗೆದ್ದಿತ್ತು. ಸಾಧಕರ ಸಾಧನೆಯನ್ನು ಕೊಂಡಾಡಲು ಎಲ್ಲರೂ ಕಾಯುತ್ತಿದ್ದರು.

ರಷ್ಯಾಗೆ ತೆರಳುವಾಗ ಫ್ರಾನ್ಸ್ ಟೂರ್ನಿಯಲ್ಲಿ ಭಾಗವಹಿಸುವ ಒಂದು ತಂಡವಾಗಿತ್ತು. ಆದ್ರೆ, ರಷ್ಯಾದಿಂದ ವಾಪಸ್ ಬರುವಾಗ ವಿಶ್ವ ಚಾಂಪಿಯನ್ ಬಿರುದು ಜೊತೆಗಿತ್ತು.

ಚಾಂಪಿಯನ್ ತಂಡ ಫ್ರಾನ್ಸ್‌ಗೆ ಬರುತ್ತಿದ್ದಂತೆ, ಶೃಂಗಾರಗೊಂಡಿದ್ದ ತೆರೆದ ಬಸ್‌ನಲ್ಲಿ ಮೆರವಣಿಗೆ. ಸ್ಟಾರ್ ಪ್ಲೇಯರ್ಸ್‌ಗಳಿಗೂ ಸಂತಸ. ತಮ್ಮ ಸಾಧನೆಗೆ ಅಭಿಮಾನಿಗಳು ನೀಡಿದ ಸ್ವಾಗತ ಖುಷಿ ನೀಡಿತ್ತು. ಬರೀ ಅಭಿಮಾನಿಗಳು ಅಷ್ಟೇ ಅಲ್ಲಾ, ಆಟಗಾರರು ಸಹ ಸುಂದರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...