alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಕ್ರಿಕೆಟ್ ಟೀಂಗೆ ಭರ್ಜರಿ ಗಿಫ್ಟ್ ನೀಡಿದ ಬಿಸಿಸಿಐ

har-1

ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಖುಷಿ ಸುದ್ದಿ ನೀಡಿದೆ. ತಂಡದ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದೆ.

ಭಾರತ ಎರಡನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್ ಪ್ರವೇಶ ಮಾಡಿದೆ. 2005ರಲ್ಲಿ ಫೈನಲ್ ಪ್ರವೇಶ ಮಾಡಿತ್ತು. ಆದ್ರೆ ಆಸ್ಟ್ರೇಲಿಯಾ ವಿರುದ್ಧ ಫೈನಲ್ ನಲ್ಲಿ ಹೀನಾಯ ಸೋಲುಂಡಿತ್ತು. ಈಗ ಅದೇ ಆಸ್ಟ್ರೇಲಿಯಾ ಟೀಂ ಮಣಿಸಿ ಭಾರತ ಟೀಂ ಫೈನಲ್ ಪ್ರವೇಶ ಮಾಡಿದೆ.

ಭಾರತ ಮಹಿಳಾ ಟೀಂ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಇದ್ರಿಂದ ಖುಷಿಯಾಗಿರುವ ಬಿಸಿಸಿಐ ಬಹುಮಾನ ಘೋಷಣೆ ಮಾಡಿದೆ. ಭಾರತ ತಂಡ ಭಾನುವಾರ ಅಂದ್ರೆ ನಾಳೆ  ಇಂಗ್ಲೆಂಡ್ ವಿರುದ್ಧ ಫೈನಲ್ ಹಣಾಹಣಿ ನಡೆಸಲಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 115 ಬಾಲ್ ಗೆ 20 ಬೊಂಡರಿ, 7 ಸಿಕ್ಸ್ ಸಿಡಿಸಿ 171 ರನ್ ಕಲೆಹಾಕಿದ್ದರು. ಫೈನಲ್ ಪಂದ್ಯದಲ್ಲೂ ಹರ್ಮನ್ ಪ್ರೀತ್ ಕೌರ್ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...