alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾ ಕಪ್ ಹಾಕಿ ಫೈನಲ್ ನಲ್ಲಿ ಚೀನಾ ಮಣಿಸಿದ ಭಾರತ

ಕಾಕಮಿಗಾರ(ಜಪಾನ್) ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು, 5-4 ಗೋಲುಗಳ ಅಂತರದಿಂದ ಚೀನಾವನ್ನು ಮಣಿಸಿದ್ದಾರೆ.

ಜಪಾನ್ ನ ಕಾಕಮಿಗಾರದಲ್ಲಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಭಾರತದ ಮಹಿಳಾ ತಂಡ ಜಯಿಸಿದ್ದು, ಪ್ರಶಸ್ತಿಯನ್ನು ಜಯಿಸುವ ಮೂಲಕ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಗೆ ನೇರ ಅರ್ಹತೆಯನ್ನು ಪಡೆದುಕೊಂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನ ತಂಡವನ್ನು, ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಭಾರತದ ವನಿತೆಯರು ಮಣಿಸಿದ್ದರು. ಫೈನಲ್ ನಲ್ಲಿ ಚೀನಾ ಎದುರು ಜಯಗಳಿಸಿದ್ದಾರೆ.

ಕಳೆದ ತಿಂಗಳು ಢಾಕಾದಲ್ಲಿ ನಡೆದ ಪುರುಷರ ಏಷ್ಯಾ ಕಪ್ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾವನ್ನು 2 -1 ಗೋಲ್ ಗಳ ಅಂತರದಿಂದ ಜಯಿಸಿತ್ತು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...