alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ ರೋಚಕ ಘಟನೆ

ಮಹಿಳೆಯರ ಬಿಗ್ ಬ್ಯಾಶ್ ಲೀಗ್ ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ಮಧ್ಯೆ ನಡೆದ ಪಂದ್ಯ ಅತ್ಯಂತ ರೋಚಕವಾಗಿತ್ತು. ಪಂದ್ಯ ಗೆದ್ದ ಬಳಿಕ ಮೆಲ್ಬರ್ನ್ ತಂಡದ ಆಟಗಾರರ ಸಂಭ್ರಮ, ಗೆಲುವನ್ನೇ ಅವರಿಂದ ಕಸಿದುಕೊಳ್ಳುತ್ತಿತ್ತು.

ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಪಂದ್ಯ ಗೆಲ್ಲಲು ಕೊನೆಯ ಬಾಲ್ ನಲ್ಲಿ 3 ರನ್ ಬೇಕಾಗಿತ್ತು. ಬ್ಯಾಟಿಂಗ್ ಮಾಡ್ತಿದ್ದ ಆ್ಯಮಿ ಕೊನೆ ಬಾಲ್ ನಲ್ಲಿ ಸಿಂಗಲ್ ಪಡೆಯಲು ಸಫಲರಾದ್ರು. ಶಾರ್ಟ್ ಫೈನ್ ಲೆಗ್ ನಲ್ಲಿದ್ದ ಕ್ರಿಸ್ ಬ್ರಿಟ್ ಚೆಂಡನ್ನು ಕೀಪರ್ ಕಡೆಗೆ ಎಸೆದಿದ್ರು. ಆದ್ರೆ ಕೀಪರ್ ಎಮ್ಮಾ ಇಂಗ್ಲಿಸ್ ಸಂಭ್ರಮಾಚರಣೆಯಲ್ಲಿ ಬ್ಯುಸಿಯಾಗಿದ್ರು.

ಇದನ್ನು ಗಮನಿಸಿದ ಆ್ಯಲಿ, ಕ್ವಿಕ್ ಆಗಿ ಓಡಿ 1 ರನ್ ಕದ್ದಿದ್ದಾರೆ. ಪಂದ್ಯವನ್ನು ಟೈ ಮಾಡಿದ್ದಾರೆ. ಅವರನ್ನು ರನೌಟ್ ಮಾಡುವ ಎದುರಾಳಿ ತಂಡದ ಪ್ರಯತ್ನ ಕೂಡ ಸಫಲವಾಗಲಿಲ್ಲ. ಇದನ್ನು ಡೆಡ್ ಬಾಲ್ ಎಂದು ಪರಿಗಣಿಸುವಂತೆ ಮೆಲ್ಬರ್ನ್ ತಂಡ ಅಂಪೈರ್ ಗೆ ಮನವಿ ಮಾಡಿತ್ತು.

ಆದ್ರೆ ಅದು ಡೆಡ್ ಬಾಲ್ ಆಗಿರಲಿಲ್ಲ. ನಂತರ ಸೂಪರ್ ಓವರ್ ನಲ್ಲಿ ಅದೃಷ್ಟವಶಾತ್ ಮೆಲ್ಬರ್ನ್ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಇಲ್ಲದೇ ಹೋದಲ್ಲಿ ಕೈಗೆ ಬಂದ ಗೆಲವು ಬಾಯಿಗೆ ಬರುತ್ತಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...