alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾ ದಾಸ್ ಕೋಚ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಹಿಮಾ ದಾಸ್ ಕೋಚ್ ನಿಪೋನ್ ದಾಸ್ ಮೇಲೆ ಇನ್ನೋರ್ವ ಶಿಷ್ಯೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 20 ವರ್ಷದ ಅಥ್ಲೀಟ್ ಮೇ ತಿಂಗಳಿನಲ್ಲಿ ತಮ್ಮ ಮೇಲೆ ಕೋಚ್ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣ ಕುರಿತಾಗಿ ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡಿದ್ದು, ಕೋಚ್ ನಿಪೋನ್ ದಾಸ್ ರ ವಿಚಾರಣೆ ನಡೆಸಿದ್ದಾರೆ. ಜೂನ್ 22 ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮೇಲೆ ಹೊರೆಸಲಾದ ಆರೋಪ ಸತ್ಯಕ್ಕೆ ದೂರವಾದದ್ದು. ತೇಜೋವಧೆಗೆ ನಡೆಸಲಾದ ಹುನ್ನಾರ ಇದಾಗಿದೆ ಎಂದು ಕೋಚ್ ನಿಪೋನ್ ಸ್ಪಷ್ಟಪಡಿಸಿದ್ದಾರೆ.

ನಿಪೋನ್ ಮೇಲೆ ಆರೋಪ ಹೊರಿಸಿರುವ ಅಥ್ಲೀಟ್, ರಾಜ್ಯ ತಂಡದಲ್ಲಿ ಸ್ಥಾನ ಪಡೆಯುವ ಆಸೆ ಹೊಂದಿದ್ದರು. ಆದ್ರೆ, ಇವರ ಟ್ರ್ಯಾಕ್ ರೆಕಾರ್ಡ್ ಅಷ್ಟೊಂದು ಉತ್ತಮವಾಗಿಲ್ಲ. ಇದೇ ಕಾರಣಕ್ಕೆ ಆರೋಪಿತ ಯುವತಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ.

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಮೀಟರ್ ಓಟದಲ್ಲಿ ಸ್ಪರ್ಣ ಸಾಧನೆ ಮಾಡಿದ ಭಾರತದ ಹಿಮಾ ದಾಸ್ ರಿಗೂ ನಿಪೋನ್ ದಾಸ್ ಕೋಚಿಂಗ್ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...