alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಗೆಲುವಿನ ನಂತ್ರ ದೇವ್ರಿ ದೇವಸ್ಥಾನಕ್ಕೆ ಧೋನಿ ಭೇಟಿ

ಜಾರ್ಖಂಡದ ರಾಜಧಾನಿ ರಾಂಚಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ದೇವ್ರಿ ದೇವಸ್ಥಾನಕ್ಕೂ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿಗೂ ವಿಶೇಷ ಸಂಬಂಧವಿದೆ. ಆಗಾಗ ಪತ್ನಿ ಸಾಕ್ಷಿ ಜೊತೆ ಈ ದೇವಸ್ಥಾನಕ್ಕೆ ಹೋಗಿ ಧೋನಿ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಐಪಿಎಲ್-11 ರ ಗೆಲುವಿನ ನಂತ್ರ ಮತ್ತೆ ದೇವ್ರಿ ದರ್ಶನ ಪಡೆದಿದ್ದಾರೆ ಕ್ಯಾಪ್ಟನ್ ಕೂಲ್.

ಧೋನಿ ದೇಶಿ ಕ್ರಿಕೆಟ್ ಆಡುತ್ತಿದ್ದ ಸಮಯದಿಂದಲೂ ತಾಯಿ ದರ್ಶನ ಪಡೆಯುತ್ತ ಬಂದಿದ್ದಾರೆ. ಮೊದಲು ಹೆಚ್ಚು ಪ್ರಸಿದ್ಧಿಯಲ್ಲಿರದ ದೇವಸ್ಥಾನ ಧೋನಿ ಭೇಟಿ ನಂತ್ರ ಹೆಚ್ಚು ಮನೆ ಮಾತಾಗಿದೆ. ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಬರ್ತಾರಂತೆ. ಇದನ್ನು ಅಲ್ಲಿನ ಪೂಜಾರಿಗಳೇ ಒಪ್ಪಿಕೊಂಡಿದ್ದಾರೆ.

ಧೋನಿ 2007 ರ ಟಿ-ಟ್ವೆಂಟಿ ವಿಶ್ವಕಪ್,  2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರತಿ ಗೆಲುವಿನ ನಂತ್ರ ಧೋನಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಐಪಿಎಲ್-11 ಶುರುವಾಗುವ ಮುನ್ನವೂ ಧೋನಿ ದೇವಸ್ಥಾನಕ್ಕೆ ಹೋಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...