alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಸಿಗಲಿದೆ ಇಷ್ಟು ಹಣ

india_1494755131_749x421

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಮೊತ್ತವನ್ನು ಘೋಷಣೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 2.2 ಮಿಲಿಯನ್ ಡಾಲರ್ ನಗದು ಬಹುಮಾನ ನೀಡಲಿದೆ.

2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 2.2 ಮಿಲಿಯನ್ ಡಾಲರ್ ಸಿಗಲಿದೆ. ರನ್ ಅಪ್ ತಂಡಕ್ಕೆ 1.1 ಮಿಲಿಯನ್ ಡಾಲರ್, ಸೆಮಿಫೈನಲ್ ತಂಡಕ್ಕೆ 450,000 ಡಾಲರ್ ಸಿಗಲಿದೆ. ಒಟ್ಟಾರೆ 4.5 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದೆ ಐಸಿಸಿ. ಹಿಂದಿನ ಬಾರಿಗಿಂತ 500,000 ಡಾಲರ್ ಹೆಚ್ಚಿಸಿದೆ ಐಸಿಸಿಯ ಬಹುಮಾನದ ಮೊತ್ತ.

ಐಸಿಸಿಯ ಎರಡನೇ ಬಹು ದೊಡ್ಡ ಟೂರ್ನಮೆಂಟ್ ಚಾಂಪಿಯನ್ಸ್ ಟ್ರೋಫಿಯಾಗಿದ್ದು, ಜೂನ್ ಒಂದರಿಂದ 18 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಹಿಂದಿನ ಬಾರಿಯ ವಿಜೇತ ತಂಡ ಭಾರತ ಆರಂಭದ ಪಂದ್ಯವನ್ನು ಜೂನ್ ನಾಲ್ಕರಂದು ಆಡಲಿದೆ. ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಅದು ಎದುರಿಸಲಿದೆ.

ಗ್ರೂಪ್ ಎ ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶವಿರಲಿದೆ. ಬಿ ತಂಡದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡ ಸೆಣೆಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...