alex Certify
ಕನ್ನಡ ದುನಿಯಾ       Mobile App
       

Kannada Duniya

ಮೂತ್ರ ವಿಸರ್ಜನೆಗೆ ಸಿಗದ ಅವಕಾಶ, ಅಂಗಣದಲ್ಲೇ ಕ್ರೀಡಾಪಟುಗಳ….

pablo-cuevas

ಲಂಡನ್: ಸತತವಾಗಿ ಆಟವಾಡುವ ಸಂದರ್ಭದಲ್ಲಿ ಆಟಗಾರರಿಗೆ ಕ್ಷಣಕಾಲ ವಿಶ್ರಾಂತಿ ನೀಡಲಾಗುತ್ತದೆ. ಬಹುತೇಕ ಕ್ರೀಡೆಗಳಲ್ಲಿ ಕ್ಷಣಕಾಲ ವಿಶ್ರಾಂತಿ ನೀಡಿ ಆಟ ಮುಂದುವರೆಸಲಾಗುತ್ತದೆ. ವಿಂಬಲ್ಡನ್ ನಲ್ಲಿ ಮೂತ್ರ ವಿಸರ್ಜನೆಗೆ ಬ್ರೇಕ್ ನೀಡದ ಕಾರಣ ಏನಾಗಿದೆ ನೋಡಿ.

ಲಂಡನ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಮೂತ್ರ ವಿಸರ್ಜನೆಗೆ ಬಾತ್ ರೂಂ ಬ್ರೇಕ್ ನೀಡಬೇಕೆಂದು ಆಟಗಾರರು ಮನವಿ ಮಾಡಿದ್ದು, ಇದಕ್ಕೆ ಅವಕಾಶ ನೀಡದ ಕಾರಣ ಅಂಗಣದಲ್ಲಿಯೇ ಮುಷ್ಕರ ನಡೆಸಿದ್ದಾರೆ. ಡಬಲ್ಸ್ ಜೋಡಿಯಾಗಿರುವ ಸ್ಪೇನ್ ನ ಮಾರ್ಸೆಲ್ ಗ್ರಾನೊಲ್ಲರ್ಸ್ ಹಾಗೂ ಉರುಗ್ವೆಯ ಪಾಬ್ಲೊ ಕ್ಯುವಾಸ್ ಅವರಿಗೆ ಮೂತ್ರ ವಿಸರ್ಜನೆಗೆ ಅರ್ಜೆಂಟ್ ಆಗಿದ್ದು, ಬ್ರೇಕ್ ನೀಡಲು ಕೇಳಿದ್ದಾರೆ. ಬಾತ್ ರೂಂ ಬ್ರೇಕ್ ಸಿಗದ ಕಾರಣ ಮುಷ್ಕರ ನಡೆಸಿದ್ದು, ಅವರಿಬ್ಬರಿಗೂ ದಂಡ ವಿಧಿಸಲಾಗಿದೆ.

ಫ್ರಾನ್ಸ್ ಅಂಪೈರ್ ಔರೆಲಿ ಟೌರ್ಟೆ ಉರುಗ್ವೆಯ ಪಾಬ್ಲೊ ಕ್ಯುವಾಸ್ ಅವರಿಗೆ ಮೂತ್ರ ವಿಸರ್ಜನೆಗೆ ಅವಕಾಶ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಪಾಬ್ಲೊ ಕ್ಯುವಾಸ್ ಅಂಗಣದಲ್ಲೇ ಚೆಂಡಿನ ಮೇಲೆ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.

ಇದು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಅಲ್ಲದೇ, ಆಟವಾಡುವಾಗ, ಉದ್ದೇಶಪೂರ್ವಕವಾಗಿ ಪಾಬ್ಲೊ ಅಂಗಣದ ಹೊರಗೆ ಚೆಂಡು ಹೊಡೆದಿದ್ದು, ಅಂಪೈರ್ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ಅಂಗಣದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಸತತವಾಗಿ ಆಟವಾಡುವಾಗ ಬಾತ್ ರೂಂ ಬ್ರೇಕ್ ನೀಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...