alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ ಆಗಿದ್ರೆ ಇನ್ನೂ 10 ವರ್ಷ ಆಡಲಿದ್ದಾರಂತೆ ಕ್ರಿಕೆಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನೂ 10 ವರ್ಷ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಫಿಟ್ ಆಗಿದ್ರೆ, ಅಭ್ಯಾಸ ಮಾಡುವ ತಾಕತ್ತಿದ್ರೆ ಇನ್ನೂ 10 ವರ್ಷ ಆಡಲು ಸಿದ್ಧ ಎಂದಿದ್ದಾರೆ. ಎಲ್ಲಿವರೆಗೆ ನಮ್ಮಲ್ಲಿ ಸಾಮರ್ಥ್ಯ ಉಳಿಯಲಿದೆ ಅನ್ನೋದನ್ನು ಹೇಳೋದು ಕಷ್ಟ ಎನ್ನುತ್ತಾರೆ 28ರ ಹರೆಯದ ವಿರಾಟ್.

ಇನ್ನು ಅಸಾಧ್ಯ ಎನಿಸುವವರೆಗೂ ನಮ್ಮನ್ನು ನಾವು ಪ್ರೋತ್ಸಾಹಿಸುತ್ತಲೇ ಇರಬೇಕು ಅನ್ನೋದು ಅವರ ಅಭಿಪ್ರಾಯ. ಕಠಿಣ ಅಭ್ಯಾಸ ನಡೆಸಲು ಸಾಧ್ಯವಾದ್ರೆ ಬಹುಷಃ ಇನ್ನು 10 ವರ್ಷ ಕ್ರಿಕೆಟ್ ಆಡಬಹುದು ಎಂದಿದ್ದಾರೆ. ವಿರಾಟ್ ಕೊಹ್ಲಿ ಫೌಂಡೇಶನ್ ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು.

ಪ್ರತಿ ವರ್ಷ 2 ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ನೀಡಲು ವಿರಾಟ್ ಕೊಹ್ಲಿ ಫೌಂಡೇಶನ್ ನಿರ್ಧರಿಸಿದೆ. ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ರು. ಗೋಪಿಚಂದ್ ಅವರ ಆಟ ಕೂಡ ತಮಗೆ ಪ್ರೇರಣೆಯಾಗಿತ್ತು ಅಂತಾ ಕೊಹ್ಲಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...