alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಾಳು ಕ್ರಿಕೆಟರ್ ಶಮಿ ಭೇಟಿಯಾದ ಪತ್ನಿ-ಮಗಳು

ವಿವಾದದ ನಂತ್ರ ಇದೇ ಮೊದಲ ಬಾರಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತನ್ನ ಪತ್ನಿ ಹಸೀನ್ ಹಾಗೂ ಮಗಳನ್ನು ಭೇಟಿಯಾಗಿದ್ದಾರೆ. ಮಾರ್ಚ್ 25ರಂದು ಮೊಹಮ್ಮದ್ ಶಮಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಪತ್ನಿ ಹಸೀನ್ ಮಗಳ ಜೊತೆ ಮಾರ್ಚ್ 27ರಂದು ಭೇಟಿಯಾಗಿದ್ದಾರೆ.

ಘಾಜಿಯಾಬಾದ್ ನ ರಾಡಿಸನ್ ಹೊಟೇಲ್ ನಲ್ಲಿ ಶಮಿ, ಪತ್ನಿ ಹಾಗೂ ಮಗಳನ್ನು ಭೇಟಿಯಾಗಿದ್ದಾರೆ. ಮಗಳನ್ನು ಎತ್ತಿಕೊಂಡು ಶಮಿ ಮುದ್ದಾಡಿದ್ದಾರೆಂದು ಮೂಲಗಳು ಹೇಳಿವೆ. ಸೋಮವಾರವೇ ಶಮಿ ಭೇಟಿ ಮಾಡುವ ಇಚ್ಛೆಯನ್ನು ಹಸೀನ್ ವ್ಯಕ್ತಪಡಿಸಿದ್ದರು. ಶಮಿ ಏನೆ ಮಾಡಿದ್ದರೂ ಅವರು ನನ್ನ ಪತಿ ಎಂದು ಹಸೀನ್ ಹೇಳಿದ್ದರು.

ನಮ್ಮಿಬ್ಬರ ನಡುವೆ ಯಾವುದೇ ಗಲಾಟೆಯಿರಲಿ, ಅವ್ರಿಗೆ ಗಾಯವಾದ್ರೆ ನಾನು ಸಹಿಸಲಾರೆ. ಶಮಿ ಏನೇ ಮಾಡಿರಲಿ. ನಾನು ಅವರನ್ನು ಈಗಲೂ ಪ್ರೀತಿ ಮಾಡುತ್ತೇನೆ. ಅವ್ರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಮಾಡ್ತೇನೆ ಎಂದಿದ್ದರು.

ಡೆಹ್ರಾಡೂನ್ ನಿಂದ ದೆಹಲಿಗೆ ಹೋಗುವ ವೇಳೆ ಶಮಿ ಕಾರ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಶಮಿ ತಲೆಗೆ ಗಾಯಗಳಾಗಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...