alex Certify
ಕನ್ನಡ ದುನಿಯಾ       Mobile App
       

Kannada Duniya

IPL ಹರಾಜು ವೀಕ್ಷಿಸದಂತೆ ಆಟಗಾರರಿಗೆ ದ್ರಾವಿಡ್ ಸೂಚಿಸಿದ್ದೇಕೆ?

ವಿಶ್ವಕಪ್ ಫೈನಲ್ ನಲ್ಲಿ ಶತಕ ಬಾರಿಸೋದು ಬಹುತೇಕ ಎಲ್ಲ ಕ್ರಿಕೆಟಿಗರ ಕನಸು. ದೆಹಲಿಯ ಮಂಜೋತ್ ಕಾಲ್ರಾ ಈ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಭಾರತ ಅಂಡರ್ -19 ತಂಡದ ವಿಶ್ವಕಪ್ ಗೆಲುವಿಗೆ ರೂವಾರಿಯಾಗಿದ್ದಾರೆ.

ದೆಹಲಿಯ ಈ ಯುವ ಕ್ರಿಕೆಟಿಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಫೈನಲ್ ಪಂದ್ಯಕ್ಕೆ ಸಜ್ಜಾಗಲು ಏಕಾಗ್ರತೆ, ಅಭ್ಯಾಸ ಎರಡೂ ಅತ್ಯಗತ್ಯ ಅನ್ನೋದನ್ನು ಮಂಜೋತ್ ಒಪ್ಪಿಕೊಂಡಿದ್ದಾರೆ. ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಐಪಿಎಲ್ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸದಂತೆ ಸೂಚಿಸಿದ್ದರು.

ಯಾಕಂದ್ರೆ ಹರಾಜಾಗದೇ ಉಳಿದ ಆಟಗಾರರ ಮನಸ್ಸಿನಲ್ಲಿ ಅದೇ ಬೇಸರ ಉಳಿದುಬಿಡುತ್ತದೆ. ಇದು ಫೈನಲ್ ಪಂದ್ಯದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ದ್ರಾವಿಡ್ ಆತಂಕವಾಗಿತ್ತು. ಹಾಗಾಗಿ ಐಪಿಎಲ್ ಹರಾಜನ್ನು ಯಾರೂ ವೀಕ್ಷಿಸಿರಲಿಲ್ಲ. ಆ ಸಮಯದಲ್ಲಿ ಟೀಮ್ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ತಮ್ಮನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಖರೀದಿಸಿದೆ ಅನ್ನೋದು ಮಂಜೋತ್ ಕಾಲ್ರಾಗೂ ಗೊತ್ತಿರಲಿಲ್ಲ. ನಂತರ ಕುಟುಂಬದವರು ಈ ಬಗ್ಗೆ ಮಾಹಿತಿ ನೀಡಿದ್ದರಂತೆ. ದ್ರಾವಿಡ್ ಅವರ ಬೆಂಬಲ ಹಾಗೂ ಅತ್ಯಮೂಲ್ಯ ಸಲಹೆಗಳಿಂದಾಗಿಯೇ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು ಅಂತಾ ಮಂಜೋತ್  ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...