alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಾ ಪ್ರಕಾರ ವಿಶ್ವ ಟಿ20 ಗೆಲ್ಲೋರ್ಯಾರು ಗೊತ್ತಾ..?

02india1

ಇನ್ನು ಕೆಲ ದಿನಗಳಲ್ಲೇ ವಿಶ್ವ ಟಿ20 ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ದ ಟಿ20 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ನೆಚ್ಚಿನ ತಂಡಗಳ ಕುರಿತು ಮಾತನಾಡಿದ್ದಾರೆ.

ಬ್ರಿಯಾನ್ ಲಾರಾ ಪ್ರಕಾರ ಟೀಮ್ ಇಂಡಿಯಾ ಈ ಬಾರಿಯ ವಿಶ್ವ ಟಿ20 ಪಂದ್ಯದಲ್ಲಿ ಚಾಂಪಿಯನ್ ಆಗಿಹೊರ ಹೊಮ್ಮುವ ಸಾಧ್ಯತೆ ಹೆಚ್ಚು. ಭಾರತದ ನೆಲದಲ್ಲಿ ಈ ಪಂದ್ಯಗಳು ನಡೆಯುತ್ತಿರುವುದು ಟೀಮ್ ಇಂಡಿಯಾ ಆಟಗಾರರಿಗೆ ವರದಾನವಾಗಲಿದೆ ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾ ಬಲಿಷ್ಟವಾಗಿದ್ದು, ಈಗ ಆಡಿರುವ ಪಂದ್ಯಗಳಿಂದ ಆಟಗಾರರಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿರುವ ಬ್ರಿಯಾನ್ ಲಾರಾ, ವೆಸ್ಟ್ ಇಂಡೀಸ್ ತಂಡ ಕೂಡಾ ಸಾಕಷ್ಟು ಪೈಪೋಟಿ ನೀಡಲಿದೆ. ಸದ್ಯ ವೆಸ್ಟ್ ಇಂಡೀಸ್ ತಂಡದಲ್ಲಿಯೂ ಅತ್ಯುತ್ತಮ ಆಟಗಾರರಿದ್ದಾರೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...