alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ 11 ರ ದುಬಾರಿ ಬೆಲೆ ಕೋಚ್ ಯಾರು ಗೊತ್ತಾ?

ಐಪಿಎಲ್ 11ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸಸ್ ಹೈದ್ರಾಬಾದ್ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಚಾಂಪಿಯನ್ ಆಗಿ ಮುಂಬೈ ತಂಡದ ಸಮಬಲ ಸಾಧಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿಗೆ ನಾಯಕ ಧೋನಿ ಜೊತೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಕಾರಣ. ಐಪಿಎಲ್ ಚಾಂಪಿಯನ್ ತಂಡ 20 ಕೋಟಿ ಗಳಿಸಿದ್ರೆ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ಸಿಕ್ಕಿದೆ. ಇನ್ನು ಸೆಹ್ವಾಗ್ ಸೇರಿ ಫ್ಲೆಮಿಂಗ್ ವರೆಗೆ ಯಾವ ಯಾವ ಕೋಚ್ ಗಳಿಗೆ ಎಷ್ಟೆಷ್ಟು ಸಂಭಾವನೆ ಸಿಕ್ಕಿದೆ ಎಂಬುದ್ರ ವಿವರ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ಬಾರಿ 3.2 ಕೋಟಿ ರೂಪಾಯಿ ಗಳಿಸಿದ್ದಾರೆ. ರನ್ನರ್ ಅಪ್ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಈ ಬಾರಿ ಐಪಿಎಲ್ ಗಳಿಕೆ 2 ಕೋಟಿ ರೂಪಾಯಿ. ಇನ್ನು ಕೊಲ್ಕತ್ತಾ ಕೋಚ್ ಜಾಕ್ ಕಾಲಿಸ್   2.25 ಕೋಟಿ ಗಳಿಸಿದ್ದಾರೆ.

ಐಪಿಎಲ್ ನ ಈ ಋತುವಿನಲ್ಲಿ ರಾಜಸ್ತಾನ ರಾಯಲ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಇದ್ರ ಕೋಚ್ ಶೇನ್ ವಾರ್ನ್ ಬೊಕ್ಕಸಕ್ಕೆ 2.7 ಕೋಟಿ ಸೇರಿದೆ. ಮುಂಬೈ ತಂಡದ ಕೋಚ್ ಮಹೇಲಾ ಜಯವರ್ಧನೆ 2.25 ಕೋಟಿ ಗಳಿಸಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಗ್ಯಾರಿ ಕರ್ಸ್ಟೈನ್ ಗಳಿಕೆ 1.5 ಕೋಟಿ.

ಕಿಂಗ್ಸ್ ಇಲವೆನ್ ಪಂಜಾಬ್ ಮೆಂಟರ್ ವಿರೇಂದ್ರ ಸೆಹ್ವಾಗ್ ಈ ಬಾರಿ 3 ಕೋಟಿ ಸಂಭಾವನೆ ಪಡೆದಿದ್ದಾರೆ. ದೆಹಲಿ ಡೇರ್ ಡೆವಿಲ್ಸ್ ಕೋಚ್ ರಿಕಿ ಪಾಂಟಿಂಗ್ ಬೊಕ್ಕಸಕ್ಕೆ ಸೇರಿದ್ದು ಬರೋಬ್ಬರಿ 3.7 ಕೋಟಿ ರೂಪಾಯಿ. ಗಳಿಕೆಯಲ್ಲಿ ದೆಹಲಿ ಕೋಚ್ ಮುಂದಿದ್ರೆ ನಂಬರ್ ನಲ್ಲಿ ದೆಹಲಿ ತಂಡ ಕೆಳ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...