alex Certify
ಕನ್ನಡ ದುನಿಯಾ       Mobile App
       

Kannada Duniya

ಈಗೇನು ಮಾಡುತ್ತಿದ್ದಾನೆ ‘ಸಾವಿರ ರನ್’ ಗಳ ಸರದಾರ?

ಅಂಡರ್ 16 ಶಾಲಾ ಮ್ಯಾಚ್ ನಲ್ಲಿ 1009 ರನ್ ಗಳಿಸಿ ವಿಶ್ವ ದಾಖಲೆ ಮಾಡಿದ್ದ ಮುಂಬೈ ಮೂಲದ ಕ್ರಿಕೆಟಿಗ ಪ್ರಣವ್ ಧಾನವಾಡೆ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಶಾಲಾ ಪಂದ್ಯದಲ್ಲಿ ದಾಖಲೆಯ 1009 ರನ್ ಗಳಿಸಿದ ಬಳಿಕ ದೇಶಾದ್ಯಂತ ಮನೆ ಮಾತಾಗಿದ್ದ ಈ ಬಾಲಕನ ಕುರಿತು ನಂತರದ ದಿನಗಳಲ್ಲಿ ಯಾವುದೇ ಮಾಹಿತಿ ಹೊರ ಬಿದ್ದಿರಲಿಲ್ಲ. ಅಂದು ಪ್ರಣವ್ ಮಾಡಿದ ಸಾಧನೆ ಕಂಡು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪ್ರತಿ ತಿಂಗಳು 10,000 ರೂ. ಸ್ಕಾಲರ್ ಶಿಪ್ ನೀಡುತ್ತಿತ್ತು.

ದಾಖಲೆ ಪಂದ್ಯವಾಡಿದ ಬಳಿಕ ಪ್ರಣವ್ ಧಾನವಾಡೆ ನಿರೀಕ್ಷಿತ ಸಾಧನೆ ಮಾಡಿಲ್ಲವೆನ್ನಲಾಗಿದೆ. ಹೀಗಾಗಿ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಆತನ ತಂದೆ, ಇನ್ನು ಮುಂದೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನೀಡುತ್ತಿರುವ ಸ್ಕಾಲರ್ ಶಿಪ್ ಪಡೆಯದಿರಲು ನಿರ್ಧರಿಸಿದ್ದಾರೆ.

ಪ್ರಣವ್ ಧಾನವಾಡೆ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಆತನ ಕೋಚ್ ಮೊಬೀನ್ ಶೇಕ್, ಒತ್ತಡದ ಕಾರಕ್ಕೆ ಪ್ರಣವ್ ನ ಸಾಧನೆ ಕುಂಠಿತವಾಗಿದ್ದು. ಮುಂದಿನ ವರ್ಷ ಮತ್ತೆ ಆತ ಸಾಧನೆಯ ಶಿಖರವೇರುವ ವಿಶ್ವಾಸವಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...