alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ದ್ರಾವಿಡ್ ಗೆ ಯುವತಿ ತಂದಿಟ್ಟಿದ್ದ ಫಜೀತಿ..!

dc-Cover-denbfne5sknhgujjuio9f4nmb5-20160714121024.Mediಟೀಮ್ ಇಂಡಿಯಾ ಆಟಗಾರರಾಗಿದ್ದ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಗೆ ಹೆಸರುವಾಸಿ. ಭಾರತದ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್, ತಮ್ಮ ಜೀವನದಲ್ಲಿ ನಡೆದ ಪೇಚಿನ ಪ್ರಸಂಗವೊಂದನ್ನು ಹೇಳಿಕೊಂಡಿದ್ದಾರೆ.

ಶೋ ಒಂದರಲ್ಲಿ ಪಾಲ್ಗೊಂಡಿದ್ದ ರಾಹುಲ್ ದ್ರಾವಿಡ್ ಅವರಿಗೆ ಕಾರ್ಯಕ್ರಮದ ನಿರೂಪಕ, ಟೀಮ್ ಇಂಡಿಯಾದಲ್ಲಿದ್ದ ವೇಳೆ ನಿಮಗೆ ಮಹಿಳಾ ಅಭಿಮಾನಿಗಳು ಆಪಾರ ಸಂಖ್ಯೆಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಯಾವುದಾದರು ಮರೆಯಲಾಗದ ಘಟನೆ ನಡೆದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ಉತ್ತರಿಸಿದ ರಾಹುಲ್ ದ್ರಾವಿಡ್, ಹಿಂದೆ ಕ್ರಿಕೆಟ್ ಪ್ರವಾಸ ಮುಗಿಸಿ ಬೆಳಗಿನ ಜಾವ ಮನೆಗೆ ಮರಳಿದ್ದು, ಸಂಜೆವರೆಗೂ ವಿಶ್ರಾಂತಿ ಪಡೆದಿದ್ದೆ. ಈ ಸಂದರ್ಭದಲ್ಲಿ ತಮ್ಮ ತಾಯಿಯವರು ಬಂದು, ಹೈದರಾಬಾದ್ ನಿಂದ ಮಹಿಳಾ ಅಭಿಮಾನಿಯೊಬ್ಬರು ಬಂದಿದ್ದಾರೆ ಎಂದು ಹೇಳಿದರು. ಅಲ್ಲದೇ ಆಕೆಗೆ ಕಾಫಿ ಕೊಟ್ಟು ಉಪಚರಿಸಿದ್ದರು. ತಾವು ಹೊರಗೆ ಹೋಗಿ ಆ ಯುವತಿಯನ್ನು ಭೇಟಿ ಮಾಡಿ, ಹಸ್ತಾಕ್ಷರ ನೀಡಿದ್ದಲ್ಲದೇ ಆಕೆಯೊಂದಿಗೆ ಫೋಟೊ ಕೂಡಾ ತೆಗೆಸಿಕೊಂಡಿದ್ದೆ. ಆದರೆ ನಂತರ ಆಕೆ ಆಡಿದ ಮಾತಿನಿಂದ ಶಾಕ್ ಆಯ್ತು. ನಿಮ್ಮ ಸಲುವಾಗಿ ನಾನು ಮನೆ ಬಿಟ್ಟು ಬಂದಿದ್ದು, ನಿಮ್ಮ ಮನೆಯಲ್ಲೇ ಉಳಿಯುತ್ತೇನೆಂದು ಪಟ್ಟು ಹಿಡಿದಾಗ ಏನು ಹೇಳಬೇಕೆಂದೇ ತೋಚಲಿಲ್ಲ. ಕಡೆಗೂ ಆಕೆಯ ಮನವೊಲಿಸಿ ಕಳುಹಿಸಿ ಕೊಡುವಷ್ಟರಲ್ಲಿ ಸಾಕುಸಾಕಾಯಿತೆಂದು ರಾಹುಲ್ ದ್ರಾವಿಡ್, ಅಂದು ನಡೆದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...