alex Certify
ಕನ್ನಡ ದುನಿಯಾ       Mobile App
       

Kannada Duniya

ಇತಿಹಾಸದಲ್ಲಿ ದಾಖಲಾಗಿದೆ ಅತಿ ಕೆಟ್ಟ ಬೌಲಿಂಗ್…!

ಸೇಂಟ್ ಕಿಟ್ಸ್: ಆಟಗಾರರಾಗಿರಲಿ, ಯಾರೇ ಆಗಿರಲಿ ಎಷ್ಟೇ ನಿಪುಣರು, ಬುದ್ಧಿವಂತರು ಆಗಿದ್ದರೂ ಒಮ್ಮೊಮ್ಮೆ ಎಂತಹ ಯಡವಟ್ಟುಗಳು ಸಂಭವಿಸಿ ಹಾಸ್ಯವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ವಾರ್ನರ್​ ಪಾರ್ಕ್​ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ವೆಸ್ಟ್​ಇಂಡೀಸ್​ ನಡುವಿನ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ವೇಳೆ ಆದ ಯಡವಟ್ಟು ಈಗ ಭಾರೀ ಸುದ್ದಿಗೆ ಕಾರಣವಾಗಿದೆ. ವೆಸ್ಟ್​ಇಂಡೀಸ್ ವೇಗಿ ಶೇಲ್ಡನ್ ಕಾರ್ಟೇಲ್ ಮಾಡಿದ ಬೌಲಿಂಗ್ ಕ್ರೀಡಾಭಿಮಾನಿಗಳನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಶೇಲ್ಡನ್​ ಕಾರ್ಟೆಲ್​ ಓಡಿ ಬಂದು ಎಸೆದ ಚೆಂಡು ನೇರವಾಗಿ ಬ್ಯಾಟ್ಸ್​ಮನ್​ ಕಡೆ ಹೋಗದೇ ಸ್ಲಿಪ್​ನಲ್ಲಿ ನಿಂತಿದ್ದ ಕ್ಷೇತ್ರ ರಕ್ಷಕನ ಕೈ ಸೇರಿದೆ. ಅಚ್ಚರಿಗೊಂಡ ಅಂಪೈರ್​ ಇದನ್ನು ನೋಬಾಲ್​ ಎಂದು ಪರಿಗಣಿಸಿದರು. ಕಾರ್ಟೇಲ್ ರ ಈ ಬೌಲಿಂಗ್ ಈಗ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಕೆಟ್ಟ ಬೌಲಿಂಗ್​ ಎಂದು ಪರಿಗಣಿಸಲಾಗ್ತಿದೆ.

ಕ್ರೀಡಾಲೋಕದಲ್ಲಾಗುವ ಕೆಲವೊಂದು ಯಡವಟ್ಟುಗಳು ಎಂತಹ ಹಾಸ್ಯಾಸ್ಪದವನ್ನುಂಟು ಮಾಡುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಫಾಕ್ಸ್​ ಸ್ಪೋರ್ಟ್ಸ್​ ಆಸ್ಟ್ರೇಲಿಯಾ ಫೇಸ್​ಬುಕ್​ ಪೇಜ್​ನಲ್ಲಿ ಈ ವಿಡಿಯೋವನ್ನು ಫೋಸ್ಟ್​ ಮಾಡಿದ್ದು, ಈಗಾಗಲೇ 3 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...