alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಗೆ ದಾಖಲಾದ ಕ್ರಿಸ್ ಗೇಲ್

gayle

ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆರೋಗ್ಯದಲ್ಲಿ ಏರುಪೇರಾಗಿದೆ. ಗೇಲ್ ಆಸ್ಪತ್ರೆ ಸೇರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೇಲ್ ಈ ವಿಷಯವನ್ನು ತಿಳಿಸಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಗೇಲ್ ಅಪ್ಲೋಡ್ ಮಾಡಿದ್ದಾರೆ.

ಗೇಲ್ ಕೈಗೆ ಗ್ಲುಕೋಸ್ ಹಾಕಲಾಗಿದೆ. ಆದ್ರೆ ಮುಖದಲ್ಲಿ ನಗುವಿದ್ದು, ವಿಕ್ಟರಿ ಸೂಚನೆ ನೀಡಿರುವ ಫೋಟೋವನ್ನು ಗೇಲ್ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಗೇಲ್ ಆಸ್ಪತ್ರೆ ಸೇರಲು ಕಾರಣ ತಿಳಿದುಬಂದಿಲ್ಲ.

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಟ್ವೀಟರ್ ನಲ್ಲಿ ಗೇಲ್ ಆರೋಗ್ಯ ವಿಚಾರಿಸಿದ್ದಾರೆ. ವಿಶ್ವದ ಕಿಂಗ್ ಬೇಗ ಗುಣವಾಗ್ತೀರಾ. ಹಾಗೆ ದೀರ್ಘ ಕಾಲ ಬಾಳ್ತಿರಾ ಎಂದಿರುವ ಸೆಹ್ವಾಗ್ ಏನಾಯ್ತು ಎಂದು ಟ್ವಿಟ್ ಮಾಡಿದ್ದಾರೆ. ಇದಕ್ಕೆ ಧನ್ಯವಾದ ಎಂದಿರುವ ಗೇಲ್, ಕಾರಣವನ್ನು ಆಮೇಲೆ ಹೇಳ್ತೇನೆ ಎಂದಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...