alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಕೌಟ್ ಮಾಡುತ್ತಿದ್ದಾಗ್ಲೇ ವೇಯ್ಟ್ ಲಿಫ್ಟರ್ ದುರ್ಮರಣ

lift

ಅಮೆರಿಕದಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾಗ ಅತ್ಯಂತ ಭಾರವಾದ ಬಾರ್ಬೆಲ್ ಕತ್ತಿನ ಮೇಲೆ ಬಿದ್ದು ವೇಯ್ಟ್ ಲಿಫ್ಟರ್ ಸಾವನ್ನಪ್ಪಿದ್ದಾನೆ.

ಅಂಕೆನಿಯಲ್ಲಿರುವ ‘ಎಲೈಟ್ ಎಡ್ಜ್ ಟ್ರಾನ್ಸ್ ಫಾರ್ಮೇಶನ್ ಸೆಂಟರ್’ ನಲ್ಲಿ 22 ವರ್ಷದ ಯುವಕ ಕೈಲ್ ಥಾಮ್ಸನ್ ಎಂಬಾತ ಜಿಮ್ ಮಾಡ್ತಾ ಇದ್ದ. ಈ ವೇಳೆ 315 ಪೌಂಡ್ ತೂಕವಿದ್ದ ಬಾರ್ಬೆಲ್ ಕೈಜಾರಿ ಅವನ ಕುತ್ತಿಗೆಯ ಮೇಲೆ ಬಿದ್ದಿದೆ.

ಆ ರಭಸಕ್ಕೆ ಆತನ ಕತ್ತಿನ ನರಗಳು ಹಾಗೂ ಎಲುಬು ಸಂಪೂರ್ಣ ತುಂಡಾಗಿತ್ತು. ಹತ್ತಿರದಲ್ಲೇ ಇದ್ದ ಡೆಸ್ ಮೊಯ್ನಸ್ ಆಸ್ಪತ್ರೆಗೆ ಅವನನ್ನು ದಾಖಲು ಮಾಡಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಥಾಮ್ಸನ್ ಮೃತಪಟ್ಟಿದ್ದ. ಜಿಮ್ ನಲ್ಲಿ ಕುಳಿತಿದ್ದ ಕೆಲವರು ಈ ದುರಂತವನ್ನು ಕಣ್ಣಾರೆ ಕಂಡಿದ್ದಾರೆ. ಯುವ ವೇಯ್ಟ್ ಲಿಫ್ಟರ್ ಥಾಮ್ಸನ್, ಲೋವಾ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿ, ಪ್ಲೆಸೆಂಟ್ ಹಿಲ್ ನಲ್ಲಿ ವಾಸವಾಗಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...