alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ವಿವಾದದ ಬಗ್ಗೆ ಕೊಹ್ಲಿ ಹೇಳಿದ್ದೇನು..?

578143-kohli2

ಟೀಂ ಇಂಡಿಯಾ ಕೋಚ್ ನೇಮಕ ವಿವಾದದ ಬಗ್ಗೆ ವಿರಾಟ್ ಕೊಹ್ಲಿ ಮತ್ತೆ ಮೌನ ಮುರಿದಿದ್ದಾರೆ. ತರಬೇತುದಾರರ ಆಯ್ಕೆಯಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಅಂತಾ ಪರೋಕ್ಷವಾಗಿ ನುಡಿದಿದ್ದಾರೆ. ಕೋಚ್ ಆಯ್ಕೆಗೆ ಸಂಬಂಧಪಟ್ಟಂತೆ ಬಿಸಿಸಿಐ ಸೂಚಿಸಿದರೆ ಮಾತ್ರ ಆಟಗಾರರು ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು ಅಂತಾ ಹೇಳಿದ್ದಾರೆ.

ಬಿಸಿಸಿಐ ತರಬೇತುದಾರರ ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಿದೆ. ಅವರ ನಿರ್ಧಾರವನ್ನು ಭಾರತ ತಂಡ ಗೌರವಿಸುತ್ತದೆ ಅಂತಾ ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವಿಲ್ಲ, ವಿಂಡೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನಹರಿಸಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ.

ಸರಣಿ ಗೆಲ್ಲುವುದಷ್ಟೆ ನಮಗೆ ಮುಖ್ಯ, ಉಳಿದಿದ್ದನ್ನೆಲ್ಲ ಬಿಸಿಸಿಐ ನೋಡಿಕೊಳ್ಳುತ್ತದೆ ಅನ್ನೋದು ಕೊಹ್ಲಿಯ ಸ್ಪಷ್ಟ ನುಡಿ. ತಂಡಕ್ಕೆ ಮ್ಯಾನೇಜರ್ ಅಗತ್ಯವಿದೆಯೆಂದು ನಿಮಗನಿಸುತ್ತದೆಯೇ ಎಂಬ ಪ್ರಶ್ನೆಗೆ ಕೂಡ ವಿರಾಟ್ ನೇರವಾಗಿ ಉತ್ತರಿಸಲಿಲ್ಲ. ಅದನ್ನೆಲ್ಲ ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಬಿಸಿಸಿಐ ಸಲಹೆ ಕೇಳಿದ್ರೆ ಹೇಳುತ್ತೇನೆ ಅಂತಾ ತಿಳಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...