alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ಘೋಷಿಸಿದ ಫುಟ್ ಬಾಲ್ ತಾರೆ

ಲಂಡನ್: ಇಂಗ್ಲೆಂಡ್ ಫುಟ್ ಬಾಲ್ ತಂಡದ ಸ್ಟ್ರೈಕರ್ ವೇಯ್ನ್ ರೂನಿ ಅಂತರರಾಷ್ಟ್ರೀಯ ಫುಟ್ ಬಾಲ್ ನಿಂದ ನಿವೃತ್ತರಾಗಿದ್ದಾರೆ.

ಇಂಗ್ಲೆಂಡ್ ತಂಡದ ಮುನ್ನಡೆಯ ಆಟಗಾರ ಮತ್ತು ಮಾಜಿ ನಾಯಕರಾಗಿರುವ ವೇಯ್ನ್ ರೂನಿ 14 ವರ್ಷದ ಅಂತರರಾಷ್ಟ್ರೀಯ ಫುಟ್ ಬಾಲ್ ವೃತ್ತಿ ಜೀವನಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತಿಯನ್ನು ಘೋಷಿಸಿದ್ದೇನೆ ಎಂದು ತಿಳಿಸಿದ್ದಾರೆ.

31 ವರ್ಷದ ವೇಯ್ನ್ ರೂನಿ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು 53 ಗೋಲುಗಳನ್ನು ಬಾರಿಸಿರುವ ದಾಖಲೆಯನ್ನು ಹೊಂದಿದ್ದಾರೆ.

2003 ರಲ್ಲಿ ವೇಯ್ನ್ ರೂನಿ 17 ವರ್ಷದವರಾಗಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಫುಟ್ ಬಾಲ್ ಪಂದ್ಯವನ್ನಾಡಿದ್ದಾರೆ.

ಇಂಗ್ಲೆಂಡ್ ತಂಡವನ್ನು 119 ಪ್ರತಿನಿಧಿಸಿರುವ ಅವರು, ಮ್ಯಾಂಚೆಸ್ಟರ್ ಯುನೈಟೆಡ್ ಸೇರಿ ಹಲವು ತಂಡಗಳ ಪರ ಆಟವಾಡಿದ್ದಾರೆ.

ತಮ್ಮ ನಿವೃತ್ತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇದು ನಿಜಕ್ಕೂ ಕಠಿಣ ನಿರ್ಧಾರವಾಗಿದೆ. ತಂಡದ ವ್ಯವಸ್ಥಾಪಕರು ಮತ್ತು ಕುಟುಂಬದವರೊಂದಿಗೆ ಚರ್ಚಿಸಿಯೇ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...