alex Certify
ಕನ್ನಡ ದುನಿಯಾ       Mobile App
       

Kannada Duniya

ನಿಜವಾಗುತ್ತಾ ಸಲ್ಲೂ ಪ್ರಶ್ನೆಗೆ ಸಚಿನ್ ಹೇಳಿದ್ದ ಭವಿಷ್ಯ..?

sachin kohli 1

ಭಾರತ ಮಾತ್ರವಲ್ಲ, ವಿಶ್ವ ಕ್ರಿಕೆಟ್ ರಂಗದಲ್ಲೇ ಅಪ್ರತಿಮ ಆಟಗಾರ, ಕ್ರಿಕೆಟ್ ದೇವರು ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿರುವ ಸಚಿನ್ ತೆಂಡೂಲ್ಕರ್, ದಾಖಲೆ ಮೇಲೆ ದಾಖಲೆಗಳನ್ನು ಮಾಡಿರುವುದು ನಿಮಗೇ ಗೊತ್ತೇ ಇದೆ. ಸಚಿನ್ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ಸಚಿನ್ ತೆಂಡೂಲ್ಕರ್ ತಮ್ಮ ದಾಖಲೆಗಳನ್ನು ವಿರಾಟ್ ಕೊಹ್ಲಿ ಮುರಿಯಬಹುದೆಂದು 2012 ರಲ್ಲಿಯೇ ಭವಿಷ್ಯ ನುಡಿದಿದ್ದರು. ಅವರ ಮಾತಿಗೆ ಇಂಬು ನೀಡುವಂತೆ ಕೊಹ್ಲಿ ದಾಖಲೆಯ ಆಟವನ್ನೇ ಆಡುತ್ತಿದ್ದಾರೆ. ಸಚಿನ್ 100ನೇ ಶತಕ ದಾಖಲಿಸಿದ ಸಂದರ್ಭದಲ್ಲಿ ಖ್ಯಾತ ಉದ್ಯಮಿ ಮುಖೇಶ್ ಮತ್ತು ನೀತಾ ಅಂಬಾನಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಉದ್ಯಮಿಗಳು, ಬಾಲಿವುಡ್ ಸ್ಟಾರ್ ಗಳು, ಕ್ರಿಕೆಟ್ ಕ್ಷೇತ್ರದ ದಿಗ್ಗಜರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾತನಾಡುತ್ತಾ, ನಿಮ್ಮ ದಾಖಲೆಯನ್ನು ಹಿಂದಿಕ್ಕುವ ಭಾರತೀಯ ಯಾರು ಎಂದು ಸಚಿನ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿನ್, ನನಗನಿಸುವಂತೆ, ಭಾರತದ ಆಟಗಾರರಾದ ರೋಹಿತ್ ಶರ್ಮ ಅಥವಾ ವಿರಾಟ್ ಕೊಹ್ಲಿ ದಾಖಲೆ ಮುರಿಯಬಹುದು ಎಂದು ಹೇಳಿದ್ದಾರೆ. 2012ರಲ್ಲಿಯೇ ಸಚಿನ್ ಹೇಳಿದ್ದ ಈ ಮಾತನ್ನು ಕೊಹ್ಲಿ ತಮ್ಮ ಆಟದ ಮೂಲಕ ನಿಜ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...