alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆಯ ನೆನಪನ್ನು ಮೆಲುಕು ಹಾಕಿದ ಕ್ಯಾಪ್ಟನ್ ಕೂಲ್

ಕ್ಯಾಪ್ಟನ್ ಕೂಲ್ ಎಂದು ಕ್ರಿಕೆಟ್ ಜಗತ್ತಿನಲ್ಲಿ‌ ಹೆಸರು ಮಾಡಿದ್ದ ಮಹೇಂದ್ರ ಸಿಂಗ್ ಧೋನಿ, ತಮ್ಮ ಹತ್ತು ವರ್ಷಗಳ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಇದೇ ವೇಳೆ ಕೂಲ್ ನೆಸ್ ಗುಟ್ಟನ್ನು ಸಹ ಬಿಟ್ಟುಕೊಟ್ಟಿದ್ದಾರೆ.

ಜಲಪಾತವೊಂದರಲ್ಲಿ ತಾವು ನೀರಿಗೆ ತಲೆಯೊಡ್ಡಿರುವ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಹಾಗೆಯೇ ತಮ್ಮ ತವರೂರಾದ ರಾಂಚಿಯ ಸುತ್ತಲೂ ಇರುವ ಮೂರು ಜಲಪಾತದ ಬಗ್ಗೆ ಎರಡು ಸಾಲು ಬರೆದಿದ್ದಾರೆ.

ಹತ್ತು ವರ್ಷದ ನಂತರ ಈ ಜಲಪಾತಕ್ಕೆ ತಲೆಯೊಡ್ಡಿದಾಗ ಹಲವು ಹಳೆಯ ನೆನಪು ಮರುಕಳಿಸಿದೆ ಎಂದು ಹೇಳಿಕೊಂಡಿದ್ದಾರೆ ಮತ್ತು ತಲೆಗೆ ಉಚಿತ ಮಸಾಜ್ ಎಂದೂ ಸಹ ಹಾಸ್ಯಮಯವಾಗಿ ತಮ್ಮ ಶೀರ್ಷಿಕೆ ಮುಗಿಸಿದ್ದಾರೆ.

ಅವರು ವಿಡಿಯೋ ಅಪ್ ಲೋಡ್ ಮಾಡಿದ ಒಂದು ಗಂಟೆಯಲ್ಲೇ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದ್ದು, ಸಾವಿರಾರು ಕಮೆಂಟ್ ಬಂದಿವೆ. ವಿಡಿಯೋವನ್ನು ಚಿತ್ರೀಕರಿಸಿದ್ದು ಯಾವ ಜಲಪಾತ ಎಂದು ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಅದು ರಾಂಚಿಯಲ್ಲಿರುವ ಜೋನ್ನಾ ಫಾಲ್ಸ್ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...