alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನ ಪರ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ

ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಎಂಬಂತಾಗಿದೆ. ಕ್ರಿಕೆಟ್ ಗೆ ಸಿಕ್ಕಷ್ಟು ಮನ್ನಣೆ ಇತರೆ ಕ್ರೀಡೆಗಳಿಗೆ ಸಿಗುತ್ತಿಲ್ಲವೆಂಬ ಕೂಗು ಹಲವು ಬಾರಿ ಕೇಳಿ ಬಂದಿದೆ. ಹೀಗಾಗಿ ಕೆಲವೊಮ್ಮೆ ಖ್ಯಾತ ಕ್ರಿಕೆಟಿಗರೇ ಇತರೆ ಕ್ರೀಡೆಗಳ ಪ್ರಚಾರಕ್ಕಿಳಿದಿದ್ದಾರೆ.

ಭಾರತದಲ್ಲಿ ಈಗ ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿ ನಡೆಯುತ್ತಿದ್ದು, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಮೈದಾನಕ್ಕೆ ಆಗಮಿಸಿ ಫುಟ್ಬಾಲ್ ಪಂದ್ಯ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕೆಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದರು. ಸುನಿಲ್ ಛೆಟ್ರಿಯವರಿಗೆ ಇಂದಿನ ಪಂದ್ಯ ನೂರನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಈ ಪಂದ್ಯವನ್ನು ಸ್ಮರಣೀಯವಾಗಿಸಲು ಸುನಿಲ್ ಸಿದ್ಧತೆ ನಡೆಸಿದ್ದಾರೆ.

ಈ ಮಧ್ಯೆ ಸುನಿಲ್ ಛೆಟ್ರಿ ಮನವಿಯನ್ನು ಬೆಂಬಲಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ಸೆಲ್ಫಿ ವಿಡಿಯೋ ಒಂದನ್ನು ಹಾಕಿದ್ದಾರೆ. ನನ್ನ ಸ್ನೇಹಿತ ಸುನಿಲ್ ಛೆಟ್ರಿ ಮಾತನ್ನು ಕೇಳಿಸಿಕೊಳ್ಳಿ. ಫುಟ್ಬಾಲ್ ಮೈದಾನಕ್ಕೆ ಆಗಮಿಸುವ ಮೂಲಕ ನಮ್ಮ ರಾಷ್ಟ್ರೀಯ ತಂಡವನ್ನು ಬೆಂಬಲಿಸೋಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...