alex Certify
ಕನ್ನಡ ದುನಿಯಾ       Mobile App
       

Kannada Duniya

ಟೆನ್ನಿಸ್ ಆಡ್ತಿದ್ದಾಳೆ ಗರ್ಭಿಣಿ ಸೆರೆನಾ

serena

ಅಮೆರಿಕಾ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ 7 ತಿಂಗಳ ಗರ್ಭಿಣಿ. ಈ ಸಮಯದಲ್ಲಿಯೂ ಸೆರೆನಾ ಟೆನ್ನಿಸ್ ಬಿಟ್ಟಿಲ್ಲ. ಗರ್ಭಿಣಿ ಸೆರೆನಾ ಟೆನ್ನಿಸ್ ಆಡ್ತಾ ಇರುವ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ.

ಈವರೆಗೆ 23 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ 35 ವರ್ಷದ ಸೆರೆನಾ ಸ್ಯಾಪ್ ಚಾಟ್ ಮೂಲಕ ಕೆಲ ದಿನಗಳ ಹಿಂದಷ್ಟೇ ತಾವು ಗರ್ಭಿಣಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಸೆರೆನಾ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದರೆ ಸಹಸ್ರಾರು ಸೆರೆನಾ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದರು. ಕೆಲವೇ ಗಂಟೆಗಳಲ್ಲಿ ಸೆರೆನಾ ತಮ್ಮ ಪೋಸ್ಟ್ ಡಿಲಿಟ್ ಮಾಡಿದ್ದರು. ಆದ್ರೆ ಸೆರೆನಾ ವಕ್ತಾರರು ಸೆರೆನಾ ತಾಯಿಯಾಗುವ ವಿಷಯವನ್ನು ಸ್ಪಷ್ಟಪಡಿಸಿದ್ದರು.

ಸೆರೆನಾ ರೆಡಿಟ್ ಸಂಸ್ಥೆಯ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಈ ವಿಷಯ ಕೂಡ ಸಾಮಾಜಿಕ ಜಾಲತಾಣದಿಂದಲೇ ಹೊರಬಿದ್ದಿತ್ತು. ಈಗ ಸೆರೆನಾ ಟೆನ್ನಿಸ್ ಆಡ್ತಿರುವ ಫೋಟೋ ಹಾಗೂ ವಿಡಿಯೋವನ್ನು ತಾವೇ ಅಭಿಮಾನಿಗಳ ಮುಂದಿಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...