alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನ ಜೊತೆ ಆಟ, ಶೇನ್ ವಾರ್ನ್ ಗೆ ಸಂಕಟ

Shane_Warne_gets_b_2696719n

ಸಿಡ್ನಿ: ರಿಯಾಲಿಟಿ ಶೋ ಗಳಲ್ಲಿ ಸ್ಪರ್ಧಿಗಳಿಗೆ ಎಷ್ಟೆಲ್ಲಾ ಕಷ್ಟಕರವಾದ ಟಾಸ್ಕ್ ಗಳನ್ನು ಕೊಡುತ್ತಾರೆಂದರೆ, ಯಾಕಾದರೂ ಬಂದಿದ್ದೇವೆ ಎಂದೊಮ್ಮೆ ಅವರಿಗೆ ಅನ್ನಿಸದೇ ಇರದು. ಹೀಗೆ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದ ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಸಂಕಟ ಅನುಭವಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಅವರು ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದು, ಹಾವಿನಿಂದ ಕಚ್ಚಿಸಿಕೊಂಡು ತೊಂದರೆ ಅನುಭವಿಸಿದ್ದಾರೆ. ದಕ್ಷಿಣ ಆಫ್ರಿಕಾ ಕಾಡಿನಲ್ಲಿ ರಿಯಾಲಿಟಿ ಶೋ ಆಯೋಜಿಸಿದ್ದು, ಅದರಲ್ಲಿ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್ ಗಳನ್ನು ಕೊಡಲಾಗಿದೆ. ಅಲ್ಲದೇ, ಈ ಶೋ ನಲ್ಲಿ ಸೆಲೆಬ್ರಿಟಿಗಳಿಂದಲೂ ಟಾಸ್ಕ್ ಮಾಡಿಸಲಾಗುತ್ತದೆ. ಇಂತಹ ಒಂದು ಟಾಸ್ಕ್ ಮಾಡಲು ಹೋಗಿದ್ದ ಶೇನ್ ವಾರ್ನ್ ಆನಕೊಂಡ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ.

ಮಿನಿ ಆನಕೊಂಡ ಸೇರಿದಂತೆ ಮೂರ್ನಾಲ್ಕು ಹಾವುಗಳನ್ನು ಇಡಲಾಗಿದ್ದ ಗಾಜಿನ ಬಾಕ್ಸ್ ನಲ್ಲಿ ಇಲಿಗಳನ್ನು ಕೂಡ ಹಾಕಿದ್ದು, ಅದರಲ್ಲಿನ ಸಣ್ಣ ಬಾಕ್ಸ್ ಒಂದರಲ್ಲಿ ಇಟ್ಟಿದ ವಸ್ತುವನ್ನು ಬಾಗಿ ಬಾಯಿಯಿಂದ ತೆಗೆಯಬೇಕಿತ್ತು. ಈ ಟಾಸ್ಕ್ ಮಾಡುವ ಸಂದರ್ಭದಲ್ಲಿ ಶೇನ್ ವಾರ್ನ್ ಅವರ ತಲೆಗೆ ಹಾವು ಕಚ್ಚಿದೆ. ಕೂಡಲೇ ಅವರು ತಲೆಯನ್ನು ಹೊರಗೆ ಎಳೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...