alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಇಷ್ಟವಾಗಿದೆ ಮೂಗುತಿ ಸುಂದರಿಯ ಮಸ್ತಿ ವಿಡಿಯೋ

sania-mirza

ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಳೆಯ ವಿಡಿಯೋ ಒಂದನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಕಳೆದ ವರ್ಷ ಸಹೋದರಿ ಅನಮ್ ಮದುವೆ ಸಂದರ್ಭದ ವಿಡಿಯೋ ಇದಾಗಿದ್ದು, ಸಾನಿಯಾಳ ಬಾಲಿವುಡ್ ಗೆಳತಿಯರೆಲ್ಲ ಇದರಲ್ಲಿದ್ದಾರೆ.

ಸಾನಿಯಾ ಮಿರ್ಜಾ, ಪರಿಣಿತಿ ಚೋಪ್ರಾ ಹಾಗೂ ಫರ್ಹಾ ಖಾನ್ ಮದುವೆ ಮನೆಯಲ್ಲಿ ಸಖತ್ ಮಸ್ತಿ ಮಾಡಿದ್ದಾರೆ. ಕಾಲಾ ಚಶ್ಮಾ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಮೂವರ ಮಸ್ತಿ ಮೂಡ್ ಅನ್ನು ಈ ವಿಡಿಯೋದಲ್ಲಿ ನೋಡಬಹುದು.

ಸಾನಿಯಾ ಪೋಸ್ಟ್ ಮಾಡಿರೋ ವಿಡಿಯೋವನ್ನು ಈಗಾಗ್ಲೇ 1.2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಕಮೆಂಟ್ಸ್, ಲೈಕ್ಸ್ ಕೂಡ ಬಂದಿವೆ. 2016ರ ನವೆಂಬರ್ 18ರಂದು ಸಾನಿಯಾ ಮಿರ್ಜಾ ಸಹೋದರಿ ಅನಮ್ ವಿವಾಹ ನೆರವೇರಿತ್ತು.

ಮದುವೆಗೆ ಬಾಲಿವುಡ್ ಸ್ಟಾರ್ ಗಳ ದಂಡೇ ಹರಿದು ಬಂದಿತ್ತು. ಫರ್ಹಾ ಖಾನ್, ಪರಿಣಿತಿ ಚೋಪ್ರಾ, ಸಲ್ಮಾನ್ ಖಾನ್, ಅರ್ಜುನ್ ಕಪೂರ್ ಆಗಮಿಸಿದ್ರು. ದಕ್ಷಿಣದ ಸೂಪರ್ ಸ್ಟಾರ್ ರಾಮ್ ಚರಣ್ ಕೂಡ ಶುಭ ಹಾರೈಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...