alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ-ಪಾಂಡ್ಯ ಮಧ್ಯೆ ರನ್ನಿಂಗ್ ರೇಸ್, ಗೆದ್ದವರ್ಯಾರು..?

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ಅತ್ಯಂತ ಫಿಟ್ ಆಗಿರೋ ಆಟಗಾರ. ವಿಕೆಟ್ ಕೀಪಿಂಗ್ ನಲ್ಲಂತೂ ಧೋನಿಗೆ ಧೋನಿಯೇ ಸಾಟಿ. ವಿಕೆಟ್ ಮಧ್ಯೆ ಓಡಲು ಶುರು ಮಾಡಿದ್ರೆ, ನಾನ್ ಸ್ಟ್ರೈಕರ್ ಸುಸ್ತಾಗ್ತಾನೆ. ಇದೀಗ ರನ್ನಿಂಗ್ ರೇಸ್ ನಲ್ಲಿ ಧೋನಿ ತಮಗಿಂತ 12 ವರ್ಷ ಕಿರಿಯ ಆಟಗಾರನನ್ನು ಹಿಂದಿಕ್ಕಿದ್ದಾರೆ.

ಮೊಹಾಲಿಯಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರೆಲ್ಲ ಅಭ್ಯಾಸ ನಡೆಸಿದ್ರು. ಸ್ಟ್ರೆಚಿಂಗ್ ಎಕ್ಸರ್ಸೈಸ್ ಬಳಿಕ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ 100 ಮೀಟರ್ ಓಟದ ಸ್ಪರ್ಧೆ ನಡೀತು. ರೇಸ್ ತಮಾಷೆಗಾಗಿ ನಡೆದಿದ್ದಾದ್ರೂ ಧೋನಿಯ ಫಿಟ್ನೆಸ್ ಗೆ ಸಾಕ್ಷಿಯಾಗಿದೆ.

ಹಾರ್ದಿಕ್ ಪಾಂಡ್ಯರನ್ನು ಧೋನಿ ಆರಾಮಾಗಿ ಸೋಲಿಸಿದ್ದಾರೆ. ಧೋನಿಯ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ತೀರಾ ಕಳಪೆ ಪ್ರದರ್ಶನ ನೀಡಿದ್ದರು, ಆದ್ರೆ ಧೋನಿ 65 ರನ್ ಬಾರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...