alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಬೌಲರ್

bowler

ಇಂಗ್ಲೆಂಡ್ ನ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಟಿ-20 ಪಂದ್ಯವೊಂದರಲ್ಲಿ ನಾಟಿಂಗ್ಹಾಮ್ ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮಿಂಗ್ಹಾಮ್ ತಂಡದ ಬ್ಯಾಟ್ಸ್ ಮನ್ ಸ್ಯಾಮ್ ಹೈನ್ ಬಾರಿಸಿದ ಸ್ಟ್ರೇಟ್ ಡ್ರೈವ್ ಫ್ಲೆಚರ್ ತಲೆಗೆ ಬಡಿದಿದೆ.

ಚೆಂಡು ಬಡಿದ ರಭಸಕ್ಕೆ ಫ್ಲೆಚರ್ ವಿಕೆಟ್ ನಡುವೆಯೇ ಕುಸಿದು ಬಿದ್ರು. ಕೂಡಲೇ ಅವರನ್ನು ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅವಘಡದಿಂದ ಎರಡೂ ತಂಡದ ಆಟಗಾರರು ಆಘಾತಕ್ಕೊಳಗಾಗಿದ್ದಾರೆ.

ನಾಟಿಂಗ್ಹಾಮ್ ಶೈರ್ ತಂಡದ ಕೋಚ್ ಪೀಟರ್ ಮೂರ್ಸ್ ಆಟಗಾರರನ್ನುದ್ದೇಶಿಸಿ ಮಾತನಾಡಿದ್ರು, ಈ ವೇಳೆ ಸಮಿತ್ ಪಟೇಲ್ ಕಣ್ಣೀರು ಹಾಕಿದ್ದಾರೆ. ಅರ್ಧ ಗಂಟೆ ನಂತರ ಆಟವನ್ನು ಪುನರಾರಂಭಿಸಲಾಯ್ತು. ಒಂದು ದಿನಪೂರ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಫ್ಲೆಚರ್, ಕೊಂಚ ಚೇತರಿಸಿಕೊಂಡಿದ್ದಾರೆ.

ಈ ಘಟನೆಯ ನಂತರ ಫ್ಲೆಚರ್ ಅವರ ನಾಟಿಂಗ್ಹಾಮ್ ಶೈರ್ ತಂಡ ಬರ್ಮಿಂಗ್ಹಾಮ್ ವಿರುದ್ಧ 6 ವಿಕೆಟ್ ಗಳಿಂದ ಸೋಲು ಅನುಭವಿಸಿದೆ. ಕೊನೆಯ ಚೆಂಡಿನಲ್ಲಿ ಬರ್ಮಿಂಗ್ಹಾಮ್ ಗೆಲುವು ಸಾಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...