alex Certify
ಕನ್ನಡ ದುನಿಯಾ       Mobile App
       

Kannada Duniya

2017 ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲ್ಲ ವಾಸಿಂ ಅಕ್ರಂ

2016_12image_12_45_159090000akram-ll

ಪಾಕಿಸ್ತಾನದ ವೇಗಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನ ಬೌಲಿಂಗ್ ಕೋಚ್ ವಾಸಿಂ ಅಕ್ರಂ 2017ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಖಾಸಗಿ ಕಾರಣ ಹಾಗೂ ಸಮಯದ ಅಭಾವದಿಂದಾಗಿ ವಾಸಿಂ ಕೋಚ್ ಕಾರ್ಯ ನಿರ್ವಹಿಸುವುದಿಲ್ಲ ಎನ್ನಲಾಗಿದೆ.

ಬೌಲಿಂಗ್ ಕೋಚ್ ಹಾಗೂ ಸಲಹೆಗಾರ ವಾಸಿಂ ಅಕ್ರಂ 2017ರ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕೆಕೆಆರ್ ತಿಳಿಸಿದೆ. ಖಾಸಗಿ ಕಾರಣ ಹಾಗೂ ಸಮಯದ ಅಭಾವದಿಂದಾಗಿ ಅವರು ಮುಂದಿನ ವರ್ಷದ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೆಕೆಆರ್ ತಂಡಕ್ಕೆ ವಾಸಿಂ ಕೊಡುಗೆ ಸಾಕಷ್ಟಿದೆ. 2012 ಮತ್ತು 2014ರ ಐಪಿಎಲ್ ನಲ್ಲಿ ಕೆಕೆಆರ್ ಗೆಲುವಿಗೆ ವಾಸಿಂ ಮಹತ್ವದ ಪಾತ್ರವಹಿಸಿದ್ದಾರೆ. ತಂಡಕ್ಕೆ ಅವರ ಅಭಾವ ಕಾಡಲಿದೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುತ್ತೇವೆ ಎಂದು ಕೆಕೆಆರ್ ಸಿಇಓ ತಿಳಿಸಿದ್ದಾರೆ.

ತಂಡದ ಜೊತೆ ಒಳ್ಳೆಯ ಸಂಬಂಧವಿದೆ. ತಂಡದ ಸಲಹೆಗಾರನಾಗಿ ನಾನು ಸಾಕಷ್ಟು ಕಲಿತಿದ್ದೇನೆ. ತಂಡಕ್ಕೆ ಶುಭ ಕೋರುತ್ತೇನೆಂದು ವಾಸಿಂ ಅಕ್ರಂ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...