alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಕೊಹ್ಲಿ ಆಟವನ್ನು ಹೊಗಳಿದ ಪಾಕ್ ಕ್ರಿಕೆಟಿಗನಿಗೆ ಕಪಾಳಮೋಕ್ಷ

akramಕ್ರಿಕೆಟ್ ಲೋಕಕ್ಕೆ ಕಪ್ಪು ಚುಕ್ಕೆಯಾಗುವಂತಹ ಘಟನೆ ನಡೆದಿದೆ. ಸಂಗೀತ, ಕ್ರೀಡೆಗೆ ದೇಶ, ಭಾಷೆಗಳ ಹಂಗಿಲ್ಲ ಎಂಬ ಮಾತು ಸುಳ್ಳಾಗಿದೆ. ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ ಜಯ ಸಾಧಿಸಿದ್ದಕ್ಕಾಗಿ ಅಭಿನಂದಿಸಿ ಮಾತನಾಡುತ್ತಿದ್ದ ವೇಳೆ ಪಾಕ್ ಹಿರಿಯ ಕ್ರಿಕೆಟಿಗನಿಗೆ ಅಡ್ಡಿಪಡಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸೀಂ ಅಕ್ರಮ್, ಭಾರತೀಯ ಚಾನೆಲ್ ಒಂದರ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂಬೈನಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅವರು ಭಾರತ ತಂಡದ ಗೆಲುವಿಗೆ ಅಭಿನಂದಿಸಿದರಲ್ಲದೇ ವಿರಾಟ್ ಕೊಹ್ಲಿಯವರ ಅದ್ಬುತ ಆಟವನ್ನು ಹೊಗಳಿದ್ದಾರೆ.

ನೋಡನೋಡುತ್ತಿದ್ದಂತೆಯೇ ಇಬ್ಬರು ವ್ಯಕ್ತಿಗಳು ಲೈವ್ ಕಾರ್ಯಕ್ರಮದಲ್ಲೇ ವಾಸೀಂ ಅಕ್ರಮ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯಿಂದ ವಾಸೀಂ ಅಕ್ರಮ್ ಸೇರಿದಂತೆ ಕಾರ್ಯಕ್ರಮ ನಿರೂಪಕನಿಗೂ ಶಾಕ್ ಆಗಿದೆ. ಇದಾದ ಬಳಿಕ ಟ್ವೀಟ್ ಮಾಡಿರುವ ವಾಸೀಂ ಅಕ್ರಮ್, ಲಾಹೋರ್ ಸ್ಪೋಟವನ್ನು ಪ್ರಸ್ತಾಪಿಸಿ ಈ ಸಂದರ್ಭದಲ್ಲಿ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಘಟನೆ ಕುರಿತು ಮಾತನಾಡಿರುವ ಟಿವಿ ಚಾನೆಲ್ ನವರು, ಅಲ್ಲಿ ಕಾರ್ಯಕ್ರಮ ನಡೆಸಲು ಕೆಲವರ ವಿರೋಧವಿತ್ತು. ಅವರು ಈ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ವಿಡಿಯೋದಲ್ಲಿ ವಾಸೀಂ ಅಕ್ರಮ್ ಅವರ ಮೇಲೆ ಕೈ ಮಾಡಿರುವುದು ಕಂಡು ಬರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...