alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಂಡು ವಿರೂಪ ಪ್ರಕರಣ : ಕಣ್ಣೀರಿಟ್ಟ ಡೇವಿಡ್ ವಾರ್ನರ್

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಂಕಿತ ಆಟಗಾರ ಡೇವಿಡ್ ವಾರ್ನರ್ ಕ್ಷಮೆ ಯಾಚಿಸಿದ್ದಾರೆ. ನಿಷೇಧದ ನಂತ್ರ ಇದೇ ಮೊದಲ ಬಾರಿ ಶನಿವಾರ ಮಾಧ್ಯಮಗಳ ಮುಂದೆ ಬಂದ ಡೇವಿಡ್ ವಾರ್ನರ್ ಕಣ್ಣೀರಿಟ್ಟಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡ ವಾರ್ನರ್, ನನ್ನಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮುಜುಗರಕ್ಕೊಳಗಾಗಿದೆ ಎಂದ್ರು.

ಆಸ್ಟ್ರೇಲಿಯಾ ಸಹ ಆಟಗಾರರು ಹಾಗೂ ಸಿಬ್ಬಂದಿಯ ಕ್ಷಮೆ ಕೋರುತ್ತೇನೆ. ಕೇಪ್ ಟೌನ್ ನಲ್ಲಿ ಮೂರನೇ ದಿನ ಏನು ನಡೀತೋ ಅದಕ್ಕೆ ನಾನು ಹೊಣೆಯಾಗಿದ್ದೇನೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ವಾರ್ನರ್ ಪ್ರಮುಖ ಆರೋಪಿಯಾಗಿದ್ದಾರೆ. ಚೆಂಡು ವಿರೂಪಗೊಳಿಸುವಂತೆ ವಾರ್ನರ್ ಸಹ ಆಟಗಾರರಿಗೆ ನಿರ್ದೇಶಿಸಿದ್ದರು ಎನ್ನಲಾಗಿದೆ.

ಆಸ್ಟ್ರೇಲಿಯಾ ಪರ ಇನ್ನು ಆಡಲು ಸಾಧ್ಯವಿಲ್ಲ ಎನ್ನಿಸುತ್ತಿದೆ. ಅದ್ರ ಬಗ್ಗೆ ನನಗಿದ್ದ ಭರವಸೆ ಮಂಕಾಗಿದೆ. ದೇಶಕ್ಕಾಗಿ ಮತ್ತೆ ಆಡಬೇಕೆಂಬ ಸಣ್ಣ ಆಸೆಯಿದೆ. ಆದ್ರೆ ಅದು ಸಾಧ್ಯವಿಲ್ಲ ಎನ್ನಿಸುತ್ತಿದೆ ಎಂದು ವಾರ್ನರ್ ಹೇಳಿದ್ದಾರೆ. ನನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಕ್ಷಮೆ ಕೋರುತ್ತೇನೆಂದು ವಾರ್ನರ್ ಹೇಳಿದ್ದಾರೆ. ಅಭಿಮಾನಿಗಳು ನನ್ನನ್ನು ಸಾಕಷ್ಟು ಬೆಂಬಲಿಸಿದ್ದಾರೆ. ಆದ್ರೆ ಅವ್ರ ನಂಬಿಕೆಯನ್ನು ನಾನು ಹಾಳು ಮಾಡಿದ್ದೇನೆ. ಅವ್ರಿಗೆ ದ್ರೋಹ ಬಗೆದಿದ್ದೇನೆ ಎಂದು ವಾರ್ನರ್  ಕಣ್ಣೀರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...