alex Certify
ಕನ್ನಡ ದುನಿಯಾ       Mobile App
       

Kannada Duniya

ರಂಜಾನ್ ತಿಂಗಳಿನಲ್ಲಿ ಕೇಕ್ ತಿಂದು ಕ್ಷಮೆ ಕೇಳಿದ ಆಟಗಾರ

ಪಾಕಿಸ್ತಾನದ ಮಾಜಿ ಕ್ರಿಕೆಟರ್ ದೇಶವಾಸಿಗಳ ಮುಂದೆ ಕ್ಷಮೆ ಕೇಳಿದ್ದಾರೆ. ರಂಜಾನ್ ತಿಂಗಳಿನಲ್ಲಿ ಕೇಕ್ ಕತ್ತರಿಸಿ ಪೇಚಿಗೆ ಬಿದ್ದು ವಕಾರ್ ಯೂನಿಸ್, ದೇಶದ ಜನರ ಕ್ಷಮೆ ಕೋರಿದ್ದಾರೆ.

ಭಾನುವಾರ ಪಾಕಿಸ್ತಾನದ ಆಟಗಾರ ವಾಸಿಂ ಅಕ್ರಂ 52ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ವಾಸಿಂ ಸದ್ಯ ಇಂಗ್ಲೆಂಡ್ ನಲ್ಲಿದ್ದಾರೆ. ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ವಾಸಿಂ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಲಾಗಿದೆ. ಅಲ್ಲಿದ್ದ ವಕಾರ್ ಯೂನಿಸ್ ಸೇರಿದಂತೆ ಎಲ್ಲ ಆಟಗಾರರು ಕೇಕ್ ಕತ್ತರಿಸಿ ಕೇಕ್ ತಿಂದಿದ್ದಾರೆ.

ಕೇಕ್ ತಿಂದ ಮೇಲೆ ಯೂನಿಸ್ ಗೆ ಮನವರಿಕೆಯಾಗಿದೆ. ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದ್ದು, ಮುಸ್ಲಿಂ ಬಾಂಧವರ ಮನಸ್ಸಿಗೆ ನೋವುಂಟು ಮಾಡಿದ್ದೇನೆಂದು ಯೂನಿಸ್ ಕ್ಷಮೆ ಕೋರಿದ್ದಾರೆ. ವಾಸಿಂ ಸಹೋದರನ ಹುಟ್ಟುಹಬ್ಬವಾಗಿತ್ತು. ಮುಸ್ಲಿಂ ಬಾಂಧವರ ರೋಜಾಗೆ ಮಾನ್ಯತೆ ನೀಡದೆ ಕೇಕ್ ಕತ್ತರಿಸಿ ತಿಂದು ತಪ್ಪು ಮಾಡಿದ್ದೇವೆ. ಈ ಸಂಬಂಧ ಮುಸ್ಲಿಂ ಬಾಂಧವರ ಕ್ಷಮೆ ಕೋರುತ್ತೇನೆಂದು ಯೂನಿಸ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...