alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾದ ಬಸ್ ಚಾಲಕರಾಗಿದ್ದರಂತೆ ಧೋನಿ…!

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ, ಮೈದಾನದಲ್ಲಿ ಎಷ್ಟು ಗಂಭೀರವಾಗಿರ್ತಾರೋ ಹೊರಗೆ ಅದ್ರ ಉಲ್ಟಾ. ಸರಳ, ಸಜ್ಜನ ಧೋನಿ ತಮಾಷೆ ಮಾಡುತ್ತ ಸುತ್ತಮುತ್ತಲ ಪರಿಸರವನ್ನು ಸಂತೋಷವಾಗಿಟ್ಟುಕೊಳ್ತಾರೆ. ಅವಕಾಶ ಸಿಕ್ಕಾಗ ಎಂಜಾಯ್ ಮಾಡಬೇಕು ಎಂಬುದು ಧೋನಿ ಪಾಲಿಸಿ.

ಭಾರತದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ತಮ್ಮ ಆತ್ಮಚರಿತ್ರೆ `281 ಎಂಡ್ ಬಿಯಾಂಡ್’ನಲ್ಲಿ ಆಟಗಾರರ ಬಗ್ಗೆ ಬರೆದಿದ್ದಾರೆ. ಇದ್ರಲ್ಲಿ ಧೋನಿ ಬಗ್ಗೆಯೂ ಲಕ್ಷ್ಮಣ್ ಬರೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿಯ ಆ ಸಂಗತಿ ನನಗೆ ಸದಾ ನೆನಪಿನಲ್ಲಿರುತ್ತದೆ. ಧೋನಿ ಟೀಂ ಇಂಡಿಯಾಕ್ಕಾಗಿ ಬಸ್ ಚಲಾಯಿಸಿದ್ದರು ಎಂದು ಲಕ್ಷ್ಮಣ್ ಬರೆದಿದ್ದಾರೆ.

ನನ್ನ 100 ನೇ ಟೆಸ್ಟ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಧೋನಿ ನಾಗ್ಪುರದಿಂದ ಹೊಟೇಲ್ ವರೆಗೆ ಬಸ್ ಚಲಾಯಿಸಿದ್ದರು ಎಂದು ಲಕ್ಷ್ಮಣ್ ಬರೆದಿದ್ದಾರೆ. ಕುಂಬ್ಳೆ ನಾಯಕತ್ವಕ್ಕೆ ವಿದಾಯ ಹೇಳಿದ ನಂತ್ರ ಇದು ಧೋನಿ ನಾಯಕತ್ವದಲ್ಲಿ ನಡೆಯುತ್ತಿದ್ದ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಟೀಂ ಇಂಡಿಯಾ ನಾಯಕ ಬಸ್ ಚಲಾಯಿಸುತ್ತಿದ್ದರು. ನನಗೆ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ. ಮೈದಾನದಿಂದ ಹೊಟೇಲ್ ವರೆಗೆ ಬಸ್ ಚಲಾಯಿಸಿದ್ದರು ಧೋನಿ ಎಂದಿದ್ದಾರೆ.

ಧೋನಿಯಂತಹ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ. ಧೋನಿ ಎಂದೂ ತಮ್ಮ ಕೋಣೆಯ ಬಾಗಿಲು ಹಾಕ್ತಿರಲಿಲ್ಲ. ನಾನು ನಿವೃತ್ತಿ ಘೋಷಣೆ ಮಾಡುವ ವೇಳೆಗೆ ಧೋನಿ ಉತ್ತಮ ನಾಯಕನಾಗಿ ಹೊರಹೊಮ್ಮಿದ್ದರು. ಆದ್ರೂ ಅವ್ರು ರಾತ್ರಿ ಮಲಗುವ ವೇಳೆ ಕೋಣೆ ಬಾಗಿಲು ಹಾಕುತ್ತಿರಲಿಲ್ಲವೆಂದು ಲಕ್ಷ್ಮಣ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...