alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯವೇ ಮುಳುವಾಗಿದೆ ಈ ಕ್ರೀಡಾ ಸುಂದರಿಗೆ

Sabina-Altynbekova-HD-Wallpaperಕಜಕಿಸ್ತಾನದ ರಾಷ್ಟೀಯ ಜ್ಯೂನಿಯರ್ ವಾಲಿಬಾಲ್ ತಂಡದ ಸದಸ್ಯೆ 18 ವರ್ಷದ ಸಬೀನಾ ಅಲ್ಟಿನಬೆಕೋವಾಗೆ ಆಕೆಯ ಅಪ್ರತಿಮ ಸೌಂದರ್ಯವೇ ಕ್ರೀಡಾ ಜೀವನಕ್ಕೆ ಧಕ್ಕೆ ತಂದಿದೆ. ತನ್ನ ಹೆಚ್ಚುತ್ತಿರುವ ಜನಪ್ರಿಯತೆಗೆ ಮೊದಮೊದಲು ಸಂತೋಷಿಸಿದ್ದ ಸಬೀನಾ ಈಗ ಇದರಿಂದ ಬೇಸತ್ತಿದ್ದು, ನನ್ನ ಆಟವನ್ನು ಆನಂದಿಸಿ ಸೌಂದರ್ಯವನ್ನಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಅತ್ಯಂತ ಸುಂದರಿಯಾಗಿರುವ ಈಕೆಯನ್ನು ನೋಡಲೆಂದೇ ಕಜಕಿಸ್ತಾನ ವಾಲಿಬಾಲ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಯುವ ಜನತೆ ಮುಗಿ ಬೀಳುತ್ತಿದ್ದು, ಈ ವೇಳೆ ನಡೆಯುವ ಗದ್ದಲದಿಂದಾಗಿ ಆಟದ ಕಡೆ ಗಮನ ಹರಿಸಲಾಗುತ್ತಿಲ್ಲವೆಂಬುದು ಸುಂದರಿ ಸಬೀನಾ ಅಲ್ಟಿನಬೆಕೋವಾ ಹಾಗೂ ಸಹ ಆಟಗಾರರ ಅಳಲು.

ಕಜಕಿಸ್ತಾನ ವಾಲಿಬಾಲ್ ತಂಡ ವಿದೇಶಕ್ಕೆ ತೆರಳಿದ ವೇಳೆ ಅಲ್ಲಿನ ಪತ್ರಿಕೆಗಳು ಈಕೆಯ ಸೌಂದರ್ಯವನ್ನು ವರ್ಣಿಸಲೆಂದೇ ಹಲವು ಪುಟಗಳನ್ನು ಮೀಸಲಿಡುತ್ತವೆ. ಇದು ಕಜಕಿಸ್ತಾನದ ಇತರೆ ಆಟಗಾರ್ತಿಯರಿಗೆ ಕಿರಿಕಿರಿಯನ್ನುಂಟು ಮಾಡಿದೆ.

ಈಕೆಯ ವಿವಿಧ ಭಂಗಿಯ ಫೋಟೋಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದ್ದು, ಕೋಟ್ಯಾಂತರ ಮಂದಿ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈಕೆಯ ಸೌಂದರ್ಯಕ್ಕೆ ಮನಸೋತ ಹಲವರು ಈಗ ವಾಲಿಬಾಲ್ ಅಭಿಮಾನಿಗಳಾಗಿದ್ದಾರಂತೆ.

ಈ ಎಲ್ಲಾ ವಿದ್ಯಾಮಾನಗಳಿಂದ ಬೇಸತ್ತಿರುವ ಕಜಕಿಸ್ತಾನದ ವಾಲಿಬಾಲ್ ಕೋಚ್, ನೀವು ಗಮನಿಸಿ ಗುರುತಿಸಬೇಕಾಗಿರುವುದು ತಂಡದ ಆಟಗಾರರ ಸಾಧನೆಯನ್ನೇ ಹೊರತು ಸಬೀನಾಳ ಸೌಂದರ್ಯವನ್ನಲ್ಲ. ಇದರಿಂದಾಗಿ ಆಟಗಾರರು ಪಂದ್ಯಾವಳಿಗಳ ಕಡೆ ಗಮನ ಕೇಂದ್ರಿಕರಿಸಲಾಗುತ್ತಿಲ್ಲವೆಂಬ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...