alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ಮಾನ್‌ ಚಿನ್ನ ಗೆದ್ದಾಗ ಅಮ್ಮನ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

ಮಗಳು ಅಂತಾರಾಷ್ಟ್ರೀಯ ಮಟ್ಟದ ಆಟದಲ್ಲಿ ಗೆಲ್ಲುವ ಸಂಭ್ರಮ ಎಲ್ಲಾ ತಾಯಂದಿರಿಗೂ ಮಹತ್ವದ್ದೇ. ಇಂತಹ ಸುಂದರ ಕ್ಷಣವನ್ನು ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸೆಹ್ವಾಗ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಏಷ್ಯನ್ ಗೇಮ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದ ಸ್ವಪ್ನ ಬರ್ಮಾನ್‌ ಅವರ ಕುಟುಂಬದ ಸಂತಸದ ಕ್ಷಣಗಳ ವಿಡಿಯೋವನ್ನು ಸೆಹ್ವಾಗ್‌ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬರ್ಮಾನ್‌ ಆಟದಲ್ಲಿ ಗೆಲ್ಲುತ್ತಿದ್ದಂತೆಯೇ ತಾಯಿ ಭಾವೋದ್ವೇಗದಿಂದ ಕಣ್ಣೀರಿಡುತ್ತಾ ಎದ್ದು ಹೋಗಿ, ಮನೆ ದೇವರಿಗೆ ನಮಸ್ಕರಿಸುವ ದೃಶ್ಯವನ್ನು ಸೆಹ್ವಾಗ್‌ ಶೇರ್‌ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ದವಡೆ ನೋವಿನಿಂದ ಬಳಲುತ್ತಿರುವ ಬರ್ಮನ್, ನೋವಿನ ನಡುವೆಯೂ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಈ ಸಾಧನೆ ಅನೇಕರಿಗೆ ಪ್ರೇರಣೆಯಾಗಿದ್ದು ಸೆಹ್ವಾಗ್‌, ಬರ್ಮನ್‌ರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಹೆಪ್ಟಾಥ್ಲಾನ್‌ನಲ್ಲಿ ಪದಕ ಗಳಿಸಿದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೂ ಬರ್ಮಾನ್‌ ಪಾತ್ರರಾಗಿದ್ದಾಳೆ. ತಂದೆ ರಿಕ್ಷಾ ಎಳೆದು ಜೀವನ ಸಾಗುತ್ತಿದ್ದರು. ಕಷ್ಟಕರ ಜೀವನ ಸಾಗಿಸಿದ ಬರ್ಮಾನ್‌, ದೇಶವೇ ಹೆಮ್ಮೆ ಪಡುವಂತಹ ಕಾರ್ಯ ಮಾಡಿದ್ದಾಳೆಂದು ಕುಟುಂಬ ವರ್ಗ ಸಂತಸ ಪಟ್ಟಿದೆ. ಸೆಹ್ವಾಗ್‌ ಸಹ ದೇಶಕ್ಕೆ ಚಿನ್ನ ಕೊಟ್ಟ ಸಾಧಕಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...