alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟ್ ನಿಂದ್ಲೇ ಸೆಹ್ವಾಗ್ ಗಳಿಸಿರೋ ಹಣವೆಷ್ಟು ಗೊತ್ತಾ?

sehwag

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವೃತ್ತಿಯ ನಂತರವೂ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಆದ್ರೆ ಕ್ರಿಕೆಟ್ ಮೈದಾನದಲ್ಲಲ್ಲ, ಸಾಮಾಜಿಕ ತಾಣಗಳಲ್ಲಿ. ಟ್ವಿಟ್ಟರ್ ನಲ್ಲಿ ವೀರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರು ಮಾಡುವ ಸ್ವಾರಸ್ಯಕರ ಟ್ವೀಟ್ ಗಳನ್ನು ಮೆಚ್ಚಿಕೊಳ್ಳದವರೇ ಇಲ್ಲ.

ಕ್ರಿಕೆಟಿಗರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೂಡ ಸೆಹ್ವಾಗ್ ಸಖತ್ ಡಿಫರೆಂಟ್ ಆಗಿ ಹೇಳ್ತಾರೆ. ತಮಾಷೆಯಾಗಿ ಎಲ್ಲರ ಕಾಲೆಳೆಯುತ್ತ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದ್ರಿಂದಾಗಿ 2016ರಲ್ಲಿ ಟ್ವಿಟ್ಟರ್ ನಲ್ಲಿ ಸೆಹ್ವಾಗ್ ಫಾಲೋವರ್ ಗಳ ಸಂಖ್ಯೆ ವಿಪರೀತ ಜಾಸ್ತಿಯಾಗಿದೆ.

ಸಾವಿರಾರು ರಿಟ್ವೀಟ್, ಕಮೆಂಟ್ಸ್, ಶೇರ್, ಲೈಕ್ಸ್ ಬರ್ತಾ ಇದೆ. ಜೊತೆಗೆ ಸೆಹ್ವಾಗ್ ಸಾಕಷ್ಟು ಹಣವನ್ನೂ ಸಂಪಾದಿಸಿದ್ದಾರೆ. ಕಳೆದ 6 ತಿಂಗಳುಗಳಲ್ಲಿ ತಮ್ಮ ಸ್ವಾರಸ್ಯಕರ ಟ್ವೀಟ್ ನಿಂದ್ಲೇ ವೀರೂ 30 ಲಕ್ಷ ರೂಪಾಯಿ ಗಳಿಸಿದ್ದಾರಂತೆ. ಅವರ ಟ್ವೀಟ್ ಗಳು ವೈರಲ್ ಆಗ್ತಾ ಇದ್ದಿದ್ರಿಂದ ಪ್ರಾಯೋಜಕರಿಂದ ಅವರಿಗೆ ಆಫರ್ ಗಳು ಬಂದಿವೆ. ಖುದ್ದು ಸೆಹ್ವಾಗ್ ಈ ವಿಷಯ ಬಹಿರಂಗಪಡಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...