alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ-ಸಚಿನ್ ಹೋಲಿಕೆ ಬಗ್ಗೆ ಸೆಹ್ವಾಗ್ ಹೇಳಿದ್ದೇನು?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂದೇ ಹೆಸರಾಗಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಚಿನ್ ದಾಖಲೆ ಮುರಿಯಲು ಅಸಾಧ್ಯ ಎನ್ನಲಾಗ್ತಿತ್ತು. ಆದ್ರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ದಾಖಲೆ ಸಮೀಪಿಸುತ್ತಿದ್ದಾರೆ. ಗೋಲ್ಡನ್ ಬಾಯ್ ಎನ್ನಿಸಿಕೊಂಡಿರುವ ಕೊಹ್ಲಿ ಮೇಲೆ ಭರವಸೆ ಹೆಚ್ಚಿದೆ. ಕೊಹ್ಲಿ ಹಾಗೂ ಸಚಿನ್ ಬಗ್ಗೆ ಹೋಲಿಕೆ ನಡೆಯುತ್ತಿದೆ.

ಈ ಬಗ್ಗೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ವೀರೇಂದ್ರ ಸೆಹ್ವಾಗ್ ಪ್ರಕಾರ, ಕೊಹ್ಲಿ-ಸಚಿನ್ ಹೋಲಿಕೆ ತಪ್ಪಂತೆ. ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೊಹ್ಲಿ 100 ಶತಕ ಬಾರಿಸಿದ ನಂತ್ರ ಸಚಿನ್ ಜೊತೆ ಹೋಲಿಕೆ ಮಾಡುವುದು ಸರಿ ಎಂದು ಸೆಹ್ವಾಗ್ ಹೇಳಿದ್ದಾರೆ.

ಕೊಹ್ಲಿ ಬಗ್ಗೆಯೂ ಮಾತನಾಡಿದ ಸೆಹ್ವಾಗ್, ಕೊಹ್ಲಿಯಿಂದ ಮಾತ್ರ ಸಚಿನ್ ದಾಖಲೆ ಮುರಿಯಲು ಸಾಧ್ಯ. ಕೊಹ್ಲಿ ಬಳಿ ಸಾಮರ್ಥ್ಯ ಹಾಗೂ ರನ್ ಗಳಿಸುವ ಹಸಿವಿದೆ. ಈ ಛಲವಿದ್ದರೆ ಮಾತ್ರ ದಾಖಲೆ ಬರೆಯಲು ಸಾಧ್ಯವೆಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...