alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡಸರ ಬಂಡವಾಳ ಬಯಲು ಮಾಡಿದ ಸೆಹ್ವಾಗ್

virender-s

ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ, ಟ್ವಿಟರ್ ದುನಿಯಾದ ಕಿಂಗ್ ಆಗಿರುವ ವೀರೇಂದರ್ ಸೆಹ್ವಾಗ್ ಮತ್ತೆ ಹಲ್ ಚಲ್ ಎಬ್ಬಿಸಿದ್ದಾರೆ.

ಇತ್ತೀಚೆಗಷ್ಟೇ ಕ್ರಿಕೆಟಿಗ ಗೌತಮ್ ಗಂಭೀರ್ ಪತ್ನಿಯ ಕುರಿತಾಗಿ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡಿತ್ತು. ಈಗ ವೀರೇಂದರ್ ಸೆಹ್ವಾಗ್ ಗಂಡಸರ ಬಂಡವಾಳ ಬಯಲು ಮಾಡಿದ್ದಾರೆ.

ಪತ್ನಿಯ ಮುಂದೆ ಗಂಡ ಹೇಗಿರುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ’ ಎಂಬ ಕವಿವಾಣಿ ಜನಪ್ರಿಯವಾಗಿದೆ. ಆದರೆ, ಸೆಹ್ವಾಗ್ ಹೇಳಿರುವಂತೆ ‘ಮನೆಯಲ್ಲಿ ಗಂಡ ಎ.ಸಿ. ಇದ್ದಂತೆ. ಹೊರಗೆ ಸೌಂಡ್ ಮಾಡಿದರೂ, ಒಳಗೆ ಶಾಂತಿದೂತನಾಗಿರಬೇಕು. ಕೂಲ್ ಆಗಿಯೇ ವರ್ತಿಸಬೇಕು. ಏಕೆಂದರೆ ರಿಮೋಟ್(ಪತ್ನಿ) ಮನೆಯಲ್ಲಿರುತ್ತದೆ.’

ಸೆಹ್ವಾಗ್ ಹೀಗೆ ಪತ್ನಿಯ ಎದುರು ಗಂಡಸರು ಕೂಲ್ ಆಗಿರುವ ಕುರಿತು ಮಾಡಿರುವ ಟ್ವೀಟ್ ರಾತ್ರೋರಾತ್ರಿ ಭಾರೀ ಸದ್ದು ಮಾಡಿದೆ. 6500 ಕ್ಕೂ ಅಧಿಕ ಲೈಕ್ಸ್, 1000 ಕ್ಕೂ ಅಧಿಕ ರೀ ಟ್ವೀಟ್ಸ್ ಕಂಡಿದೆ.

ಗಂಡಸರನ್ನು ಎ.ಸಿ.ಗೆ ಹೋಲಿಸಿರುವುದು ಸರಿಯಾಗಿಯೇ ಇದೆ ಎಂದೆಲ್ಲಾ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...