alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಚಾಚಾ’ನ ಟ್ಯಾಲೆಂಟ್ ಕುರಿತು ವೀರೂ ಮಾಡಿದ ಟ್ವೀಟ್

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಕೇವಲ ಕಾಮೆಂಟರಿ ಬಾಕ್ಸ್ ನಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಫನ್ ನೀಡ್ತಾನೆ ಇರ್ತಾರೆ.

ಅವರ ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಅಕೌಂಟ್ ಫಾಲೋವರ್ಸ್ ಗಂತೂ ವೀರೂ ಮಾಡುವ ಟ್ವೀಟ್ ಗಳಿಗೆ, ಪೋಸ್ಟ್ ಗಳಿಗೆ ಆಫ್ಟರ್ ಎಫೆಕ್ಟ್ ಏನು ಅನ್ನೋದು ಮನವರಿಕೆ ಅಗಿರುತ್ತದೆ. ಕುತೂಹಲಕಾರಿ ಮತ್ತು ಫನ್ ಫುಲ್ ಪೋಸ್ಟ್ ಗಳಿಗೆ ಎದ್ದು ಬಿದ್ದು ನಗದೆ ಇರೋದಕ್ಕೆ ಸಾಧ್ಯವೇ ಆಗೋದಿಲ್ಲ.

ಈಗ ಅಂತದ್ದೇ ಮತ್ತೊಂದು ವಾವ್ಹ್ ಫ್ಯಾಕ್ಟರ್ ಪೋಸ್ಟ್ ಒಂದನ್ನ ಸೆಹ್ವಾಗ್ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಪೋಸ್ಟ್ ಆಗಿದೆ. ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ.

ಸದ್ಯ ಕ್ರಿಕೆಟ್ ಗಿಂತ ಹೆಚ್ಚು ಫಿಫಾ ಫುಟ್ಬಾಲ್ ಫೀವರ್ ಇದೆ. ಈ ಸಂಬಂಧ ಸೆಹ್ವಾಗ್ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಹಿರಿಯ ವ್ಯಕ್ತಿಯೊಬ್ಬರು ಚಿಕ್ಕ ಕಿಟಕಿಯ ಮೂಲಕ ಮನೆಯೊಳಕ್ಕೆ ಫುಟ್ಬಾಲ್ ಒದೆಯುವ ವಿಡಿಯೋ ಈಗ ನೋಡುಗರನ್ನ ಬೆರಗುಗೊಳಿಸಿದೆ. ಈ ಹಿರಿಯಜ್ಜನನ್ನ ಸೆಹ್ವಾಗ್ ‘ಮೆಸ್ಸಿ ಕಾ ಚಾಚಾ’ ಎಂದು ಕರೆದಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆ ಮಾತು ನಿಜವೇ ಬಿಡಿ ಅಂತಲೇ ಕಾಮೆಂಟ್ ಮಾಡ್ತಿದ್ದಾರೆ.

ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಅಪಾರ ಜನ ಮೆಚ್ಚುಗೆಯನ್ನ ಪಡೀತಿದೆ. ಈ ಹಿಂದೆ ಸುನೀಲ್ ಗವಾಸ್ಕರ್ ಅವರ ಹುಟ್ಟುಹಬ್ಬ ಮತ್ತು ಜುಲೈ ತಿಂಗಳಲ್ಲಿ ಜನಿಸಿದ ಆಟಗಾರರ ಬಗ್ಗೆ ಸೆಹ್ವಾಗ್ ಮಾಡಿದ ಟ್ವೀಟ್ ಕೂಡ ಕ್ಯೂಟ್ ಆಗಿ ಸುದ್ದಿ ಮಾಡಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...