alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಕೋಚ್ ಭಾವೋದ್ವೇಗದಿಂದ ಕಣ್ಣೀರಾದ ಕ್ಷಣ….

kohli-coach

ವಿರಾಟ್ ಕೊಹ್ಲಿ ಕ್ಲಾಸ್ ಬ್ಯಾಟ್ಸ್ ಮನ್, ಒಬ್ಬ ಯಶಸ್ವಿ ನಾಯಕ. ವಿಶ್ವ ಕ್ರಿಕೆಟ್ ನಲ್ಲಿ ಕೊಹ್ಲಿ ಕಮಾಲ್ ಮಾಡಿದ್ದಾರೆ. ವಿರಾಟ್ ಸಾಧನೆಯ ಶಿಖರವೇರಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವರು ತರಬೇತುದಾರರಾದ ರಾಜ್ ಕುಮಾರ್ ಶರ್ಮಾ.

2014ರಲ್ಲಿ ಶಿಕ್ಷಕರ ದಿನಾಚರಣೆಯಂದು ತಮ್ಮ ನೆಚ್ಚಿನ ಗುರುವಿಗೆ ಶಿಷ್ಯ ಕೊಹ್ಲಿ ಅದೆಂಥಾ ಗೌರವ ನೀಡಿದ್ದರೆಂದ್ರೆ, ರಾಜ್ ಕುಮಾರ್ ಶರ್ಮಾ ಭಾವೋದ್ವೇಗಕ್ಕೆ ಒಳಗಾಗಿದ್ರು. ಕ್ರೀಡಾ ಪತ್ರಕರ್ತ ವಿಜಯ್ ಲೋಕಪಳ್ಳಿ ಬರೆದ ‘ಡ್ರಿವನ್’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.

2014 ರ ಸೆಪ್ಟೆಂಬರ್ 5, ಕಾಲಿಂಗ್ ಬೆಲ್ ಸದ್ದಾಯ್ತು, ರಾಜ್ ಕುಮಾರ್ ಶರ್ಮಾ ಅವರ ಮನೆ ಬಾಗಿಲಲ್ಲಿ ಕೊಹ್ಲಿ ಸಹೋದರ ವಿಕಾಸ್ ನಿಂತಿದ್ದರು. ಒಳಬಂದು ತನ್ನದೇ ಮೊಬೈಲ್ ನಲ್ಲಿ ನಂಬರ್ ಡಯಲ್ ಮಾಡಿ ಮಾತನಾಡುವಂತೆ ರಾಜ್ ಕುಮಾರ್ ಅವರಿಗೆ ಕೊಟ್ಟಿದ್ದರು. ಆ ಕಡೆಯಿಂದ ವಿರಾಟ್ ಕೊಹ್ಲಿ ಶಿಕ್ಷಕರ ದಿನದ ಶುಭಾಶಯ ಹೇಳಿದ್ರು. ವಿಕಾಸ್, ರಾಜ್ ಕುಮಾರ್ ಅವರ ಪಾದದ ಮೇಲೆ ಕೀಬಂಚ್ ಒಂದನ್ನು ಇಟ್ಟರು. ಮನೆಯಿಂದ ಹೊರಬಂದು ನೋಡಿದ್ರೆ ಸ್ಕೋಡಾ ರ್ಯಾಪಿಡ್ ಕಾರು ನಿಂತಿತ್ತು, ಅದು ತಮ್ಮ ಮೆಂಟರ್ ಗೆ ಕೊಹ್ಲಿ ಕೊಟ್ಟಿದ್ದ ಪ್ರೀತಿಯ ಉಡುಗೊರೆ. ಅದನ್ನು ನೋಡಿ ರಾಜ್ ಕುಮಾರ್ ಶರ್ಮಾರ ಕಣ್ಣಲ್ಲಿ ಆನಂದಭಾಷ್ಪ.

ಅವರು ಭಾವೋದ್ವೇಗಕ್ಕೊಳಗಾಗಿದ್ದು ಕೊಹ್ಲಿ ಕಾರ್ ಕೊಟ್ಟಿದ್ದಾರೆ ಎಂಬ ಕಾರಣಕ್ಕಲ್ಲ, ಶಿಕ್ಷಕರಿಗೆ ತಮ್ಮ ಬದುಕಲ್ಲಿ ಕೊಹ್ಲಿ ಕೊಟ್ಟಿದ್ದ ಮಹತ್ವವನ್ನು ನೋಡಿ. ಕೊಹ್ಲಿ ಯಶಸ್ಸಿನ ಸೂತ್ರಧಾರ ಎನಿಸಿಕೊಂಡಿರುವ ರಾಜ್ ಕುಮಾರ್ ಶರ್ಮಾ, ತಮ್ಮ ಶಿಷ್ಯನ ಸಾಧನೆ ನೋಡಿ ಹೆಮ್ಮೆಪಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...