alex Certify
ಕನ್ನಡ ದುನಿಯಾ       Mobile App
       

Kannada Duniya

1 ಗಂಟೆಯಲ್ಲೇ 17 ಸಾವಿರ ಲೈಕ್ಸ್ ಪಡೆದುಕೊಂಡ ಕೊಹ್ಲಿ ಟ್ವೀಟ್ ನಲ್ಲಿ ಅಂತದ್ದೇನಿದೆ..?

virat-kohli-anushka-sharma_2ಭಾರತ ತಂಡದ ಸ್ಪೋಟಕ ಬ್ಯಾಟ್ಸ್ ಮನ್, ಆಸ್ಟ್ರೇಲಿಯಾ ವಿರುದ್ದ ಭಾರತದ ರೋಚಕ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಒಂದು ಕೇವಲ 1 ಗಂಟೆಯೊಳಗಾಗಿ 17 ಸಾವಿರ ಲೈಕ್ಸ್ ಪಡೆದುಕೊಂಡಿರುವುದಲ್ಲದೇ 10 ಸಾವಿರ ಮಂದಿ ಇದನ್ನು ರೀ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ ಅಂತೀರಾ..? ಮುಂದೆ ಓದಿ.

ಆಸ್ಟ್ರೇಲಿಯಾ ಟೂರ್ ನಿಂದ ಮರಳಿ ಬಂದ ಬಳಿಕ ವಿರಾಟ್ ಕೊಹ್ಲಿ ಭರ್ಜರಿ ಫಾರಂ ಕಂಡುಕೊಂಡಿದ್ದಾರೆ. ಈಗ ಆಡುತ್ತಿರುವ ಎಲ್ಲ ಪಂದ್ಯಗಳಲ್ಲೂ ವಿರಾಟ್ ಯಶಸ್ಸು ಗಳಿಸುತ್ತಿದ್ದಾರೆ. ವಿರಾಟ್ ಈ ಹಿಂದೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾರೇ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲ ತಾಣದಲ್ಲಿ ಹಲವಾರು ಮಂದಿ ಟ್ವೀಟ್ ಮಾಡಿದ್ದರು. ಇದೀಗ ಕೊಹ್ಲಿ ಯಶಸ್ಸಿನ ನಂತರ ಕೊಹ್ಲಿಯನ್ನು ಬಿಟ್ಟಿದ್ದಕ್ಕೆ ಥ್ಯಾಂಕ್ಯೂ ಅನುಷ್ಕಾ ಎಂದು ಕೆಲವರು ಟ್ವೀಟ್ ಮಾಡಿದ್ದರು.

ಇದು ವಿರಾಟ್ ಕೊಹ್ಲಿಯವರನ್ನು ಕೆರಳಿಸಿದ್ದು, ಅನುಷ್ಕಾರೊಂದಿಗಿನ ಬ್ರೇಕ್ ಅಪ್ ಬಳಿಕ ಇದೇ ಮೊದಲ ಬಾರಿಗೆ ಕೊಹ್ಲಿ ಆಕೆಯ ಪರ ಬ್ಯಾಟಿಂಗ್ ಮಾಡಿದ್ದಾರೆ. ‘Shame on people for trolling @AnushkaSharma non-stop. Have some compassion. She has always only given me positivity’ ಎಂದು ಕೊಹ್ಲಿ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...