alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಯ ಪಾಕ್ ಅಭಿಮಾನಿಗೆ ಕೊನೆಗೂ ಸಿಕ್ತು ಬೇಲ್

umar-draz-virat-kohli-fan-1902

ತನ್ನ ಮನೆಯ ಮೇಲೆ ಭಾರತದ ಧ್ವಜ ಹಾರಿಸಿದ್ದ ಕಾರಣಕ್ಕಾಗಿ ಜೈಲು ಪಾಲಾಗಿದ್ದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿ, ಪಾಕಿಸ್ತಾನದ ಉಮರ್ ದರಾಜ್ ಗೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ.

ವೃತ್ತಿಯಲ್ಲಿ ಟೈಲರ್ ಆಗಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ 22 ವರ್ಷದ ಉಮರ್ ದರಾಜ್, ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಜನವರಿ 26 ರಂದು ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಅಜೇಯ 90 ರನ್ ಗಳಿಸಿದ ವೇಳೆ ಸಂತಸ ಹತ್ತಿಕ್ಕಲಾರದೆ ತನ್ನ ಅಭಿಮಾನ ತೋರ್ಪಡಿಸಲು ಮನೆ ಮೇಲೆ ಭಾರತದ ತ್ರಿವಣ ಧ್ವಜವನ್ನು ಹಾರಿಸಿದ್ದ.

ತಮಗೆ ಬಂದ ದೂರಿನ ಆಧಾರದ ಮೇಲೆ ಆತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಆನೇಕ ಪೋಸ್ಟರ್ ಗಳನ್ನು ಮನೆ ಗೋಡೆ ಮೇಲೆ ಅಂಟಿಸಿದ್ದು ಕಂಡು ಬಂದಿತ್ತು. ಭಾರತದ ರಾಷ್ಟ್ರ ಧ್ವಜ ಹಾಗೂ ಕೊಹ್ಲಿ ಪೋಸ್ಟರ್ ಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಆತನ ವಿರುದ್ದ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

ಪೊಲೀಸರು ಹಾಕಿರುವ ಸೆಕ್ಷನ್ ಗಳ ಪ್ರಕಾರ ಆತ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವೇಳೆ ತಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿಲ್ಲ. ಕೊಹ್ಲಿ ಮೇಲಿನ ಅಭಿಮಾನಕ್ಕಾಗಿ ಭಾರತದ ಧ್ವಜ ಹಾರಿಸಿದ್ದಾಗಿ ಉಮರ್ ದರಾಜ್ ಹೇಳಿಕೊಂಡಿದ್ದ. ಆದರೂ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದು, ಇದೀಗ ಒಕಾರಾ ಜಿಲ್ಲಾ ನ್ಯಾಯಾಲಯ 50 ಸಾವಿರ ರೂ. ಶ್ಯೂರಿಟಿ ಬಾಂಡ್ ನೀಡುವಂತೆ ಸೂಚಿಸಿ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...