alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದೆ ವಿರಾಟ್ ಕೊಹ್ಲಿಯ ಈ ಫೋಟೋ

ವಿರಾಟ್​ ಕೊಹ್ಲಿ, ಮೈದಾನಕ್ಕೆ ಇಳಿದ್ರೆ ಸಾಕು ಕ್ಯಾಮೆರಾ​​ ಕಣ್ಣು ಅವರ ಮೇಲೆ ಇರುತ್ತದೆ. ಏಕೆಂದ್ರೆ ಕೊಹ್ಲಿ ಬ್ಯಾಟಿಂಗ್​ ಧಾಟಿ ಅಂತಹದ್ದು. ತಮ್ಮ ಸ್ಟೈಲಿಷ್​ ಆಟದಿಂದಲೇ ಹೆಸರು ಮಾಡಿರುವ ಕೊಹ್ಲಿ, ನಿನ್ನೆಯ ಪಂದ್ಯದಲ್ಲಿ ಔಟ್​ ಆದ ಬಳಿಕ ತೋರಿದ ಹಾವಭಾವ, ಸಾಮಾಜಿಕ ತಾಣದಲ್ಲಿ ಸದ್ದು ಮಾಡ್ತಿದೆ.

ಲೀಡ್ಸ್​​ನಲ್ಲಿ ರನ್​ ಮಶೀನ್​ ಕೊಹ್ಲಿ, ಸಮಯೋಚಿತ ಆಟದ ಪ್ರದರ್ಶನ ನೀಡಿ ರನ್​​ ಗುಡ್ಡೆ ಹಾಕ್ತಾ ಇದ್ದರು. ಎದುರಾಳಿ ತಂಡ ಹೆಣೆದುಕೊಂಡ ರಣತಂತ್ರವನ್ನು ಬುಡಮೇಲು ಮಾಡಿದ ವಿರಾಟ್​​, ಆರ್ಭಟಿಸಿದ್ದರು. ಆದ್ರೆ, ಆದಿಲ್​ ರಶೀದ್​ ಇವರ ರನ್​ ದಾಹಕ್ಕೆ ಬ್ರೇಕ್​ ಹಾಕಿದ್ರು.

31ನೇ ಓವರ್​ ಬೌಲ್​ ಮಾಡಿದ ರಶೀದ್ ​ರ ಮೊದಲ ಎಸೆತವನ್ನು ಕೊಹ್ಲಿ, ತಪ್ಪಾಗಿ ಗುರುತಿಸಿದ್ರು. ರಶೀದ್​ ಲೆಗ್​ ಬ್ರೇಕ್​ ಎಸೆತ, ಲೆಗ್​ ಸ್ಟಂಪ್​ ನಲ್ಲಿ ಪುಟಿದು ನೇರವಾಗಿ ಹಾಫ್​ ಸ್ಟಂಪ್ ​​ನತ್ತ ಬಂದಿತು. ಈ ಎಸೆತವನ್ನು ವಿರಾಟ್​ ರಕ್ಷಣಾತ್ಮಕವಾಗಿ ಆಡಲು ಮುಂದಾದ್ರು. ಚೆಂಡು ಅದಾಗಲೇ ಕೊಹ್ಲಿ ಬ್ಯಾಟ್ ಮಿಸ್​​​ ಮಾಡಿ, ಹಾಫ್​​ ಸ್ಟಂಪ್ ​​ನ ಎಗರಿಸಿತ್ತು.

ವಿರಾಟ್​ ಔಟ್​ ಆಗುತ್ತಿದ್ದಂತೆ ಅಬ್ಬಾ….ಎಂದು ಉದ್ಘಾರ ತೆಗೆದ್ರು. ಲೀಡ್ಸ್​ ಅಂಗಳದಲ್ಲಿ ಇಂತಹ ಎಸೆತವನ್ನು ನಿರೀಕ್ಷೆ ಮಾಡದೆ ಇದ್ದ ಕೊಹ್ಲಿ, ಅವಕ್ಕಾದ್ರು. ಅಲ್ಲದೆ ಪೆವಿಲಿಯನ್​ ನತ್ತ ಹೆಜ್ಜೆಹಾಕಿದ್ರು.

2014ರ ಬಳಿಕ ಇದೇ ಮೊದಲ ಬಾರಿಗೆ ವಿರಾಟ್​​ ಕೊಹ್ಲಿ, ಸತತ ಮೂರು ಪಂದ್ಯಗಳಲ್ಲಿ ಸ್ಪಿನ್​ ಬೌಲರ್​​ಗಳಿಗೆ ವಿಕೆಟ್ ಒಪ್ಪಿಸಿದ್ರು. ಮೊದಲ ಪಂದ್ಯದಲ್ಲಿ ರಶೀದ್​, ಎರಡನೇ ಪಂದ್ಯದಲ್ಲಿ ಮೊಯಿನ್ ಅಲಿ ಟೀಮ್​ ಇಂಡಿಯಾ ಕ್ಯಾಪ್ಟನ್​​ ಗೆ ಖೆಡ್ಡಾ ತೋಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...